ಪುರಾತನ ಆಚರಣೆಗಳನ್ನು ಮರೆಯದಿರೋಣ

klb9
Published on

ಆಳಂದ: ನಮ್ಮ ಸಂಸ್ಕೃತಿ, ಸಂಸ್ಕಾರ ಹಾಗೂ ಆಚರಣೆಗಳನ್ನು ಮುಂದುವರಿಸಿಕೊAಡು ಹೋಗುವ ಕೆಲಸ ಪ್ರತಿಯೊಬ್ಬರೂ ಮಾಡಬೇಕು ಎಂದು ಕಲಬುರಗಿ-ಬೀದರ್ ಮತ್ತು ಯಾದಗಿರಿ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಆರ್.ಕೆ.ಪಾಟೀಲ್ ಹೇಳಿದರು.

ಶ್ರೀ ನಗರೇಶ್ವರ ರಾಮ ಮಂದಿರದಲ್ಲಿ ಆಯೋಜಿಸಿರುವ ನವರಾತ್ರಿ ಉತ್ಸವದಲ್ಲಿ ದೇವಿ ದರ್ಶನ ಪಡೆದು ಮಾತನಾಡಿದ ಅವರು, ಇಂದಿನ ಯುವ ಸಮೂಹ ಪಾಶ್ಚಾತ್ಯ ಸಂಸ್ಕೃತಿಯನ್ನು ಬಿಟ್ಟು, ನಮ್ಮ ಶ್ರೇಷ್ಠ ಪರಂಪರೆಯನ್ನು ಅನುಸರಿಸಬೇಕು. ಬ್ರಾಹ್ಮಣ ಸಮಾಜದಿಂದ ರಾಯರ ಆರಾಧನೆ, ಸ್ವಾಮಿ ಸಮರ್ಥ ಪುಣ್ಯಾರಾಧನೆ, ದೇವಿ ಉತ್ಸವ ಸೇರಿ ಇನ್ನಿತರ ಕಾರ್ಯಕ್ರಮ ಅಚ್ಚುಕಟ್ಟಾಗಿ ಮಾಡುತ್ತಾರೆ ಎಂದು ಕೇಳಿದ್ದೆ. ಆದರೆ ಕಳೆದ ಎರಡು ವರ್ಷಗಳಿಂದ ನಾನು ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, ಸಾಕಷ್ಟು ನೆಮ್ಮದಿ ಸಿಗುತ್ತಿದೆ. ನಿಮ್ಮ ಕಾರ್ಯಕ್ಕೆ ಸದಾ ಬೆಂಬಲ ನೀಡುತ್ತೇನೆ ಎಂದರು.
ಪ್ರಮುಖರಾದ ಶರಣು ಪಾಟೀಲ್, ಚಂದ್ರಕಾAತ ಹತ್ತರಕಿ, ಕಿಶೋರ ಕುಲಕರ್ಣಿ, ರವೀಂದ್ರ ಕುಲಕರ್ಣಿ, ಅರುಣ ಜೋಶಿ, ಗೋವಿಂದ ಕುಲಕರ್ಣಿ, ಸುರೇಶ ಕುಲಕರ್ಣಿ, ವಿಠ್ಠಲ್ ಪೋತದಾರ, ಪ್ರಕಾಶ ಪುಲಾರೆ, ಸಂತೋಷ ವಾಲೆ, ಶಿವು ಮರಡಿ, ನಟರಾಜ ಸರಸಂಬಿ, ಶರಣು ತಡಕಲೆ, ಮಹೇಶ ಹಿರೋಳ್ಳಿ, ಚನ್ನಪ್ಪ ಹತ್ತರಕಿ, ಲಿಂಗರಾಜ ಜಾನೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net