

ನೆಲಮಂಗಲ: ಮಾಧ್ಯಮಗಳು ಸಮಾಜದಲ್ಲಿ ಸಾಮರಸ್ಯ ಬಿತ್ತುವ ಮಹತ್ವದ ಕಾರ್ಯ ಮಾಡುತ್ತೀವೆ ಎಂದು ಸಾಹಿತಿ ಮಣ್ಣೆಮೋಹನ್ ಅಭಿಪ್ರಾಯಪಟ್ಟರು.
ನಗರದ ಡಾ. ಬಿ.ಅರ್. ಅಂಬೇಡ್ಕರ್ ಭವನದಲ್ಲಿ ಹೂ-ಅಲ್ ಶಿಫಾಹ ವನೌಷಧಿಕ ಆಯುರ್ವೇದ ವೈದ್ಯ ಪರಿಷತ್, ಜನಕಲ್ಯಾಣ ಟ್ರಸ್ಟ್ ಭಾನುವಾರ ಆಯೋಜಿಸಿದ್ದ ಮಾನವ ಧರ್ಮ 6ನೇ ಮಾಧ್ಯಮ ಸಮಾವೇಶ ಹಾಗೂ ಜನಸೇವಾ ರಾಜರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಪುರಾಣಗಳಲ್ಲಿ ಹಾಗೂ ವೇದಗಳಲ್ಲಿ ಮಾನವಧರ್ಮಕ್ಕೆ ಒತ್ತು ನೀಡಲಾಗಿದೆ. ಆದರೆ, ಇತ್ತೀಚಿಗೆ ಕೆಲವರು ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಸಂಘರ್ಷ ಮಾಡುತ್ತಿದ್ದಾರೆ. ಸಂಘರ್ಷ ಬಿಟ್ಟು ಸಮಾಜದಲ್ಲಿ ಪ್ರತಿಯೊಬ್ಬರೂ ಸಾಮರಸ್ಯ ಬಿತ್ತುವ ಕಾರ್ಯ ಮಾಡಬೇಕಿದೆ ಎಂದರು.
ಪ್ರತಿಯೊಬ್ಬರೂ ಭಾರತೀಯ ಸಂಸ್ಕೃತಿ ಮತ್ತು ಕಾನೂನಿಗೆ ಬದ್ಧರಾಗಿ ಬದುಕಿದ್ದಾಗ ಮಾತ್ರ ಸಾಮರಸ್ಯ ಸಾಧ್ಯ. 12ನೇ ಶತಮಾನದಲ್ಲಿ ಶರಣರು ಮಾನವಧರ್ಮ, ಅಧ್ಯಾತ್ಮದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸಮಾನತೆ ಒದಗಿಸಿದ್ದಾರೆ. ಸಂವಿಧಾನದ 4 ಅಂಗ ಎನಿಸಿರುವ ಪತ್ರಿಕೋದ್ಯಮ ಸಮಾಜದ ಅಂಕುಡೊಂಕು ತಿದ್ದುವಲ್ಲಿ ಮುಖ್ಯಮಾತ್ರ ವಹಿಸಿದೆ ಎಂದರು.
ಜನಕಲ್ಯಾಣ ಟ್ರಸ್ಟ್ ಅಧ್ಯಕ್ಷ ಡಾ. ಜಲಾಲುದ್ದೀನ್ ಅಕ್ಬರ್ ಮಾತನಾಡಿ, ಭೂಮಿಯ ಮೇಲೆ ಪ್ರತಿಯೊಬ್ಬರಿಗೂ ಜೀವಿಸುವ ಹಕ್ಕಿದೆ. ಎಲ್ಲರೂ ಸಮಾನತೆಯಿಂದ ಜೀವಿಸಬೇಕು. ಜಾತಿ, ಧರ್ಮಗಳ ತಾರತ್ಯಮ ಬಿಟ್ಟು ಎಲ್ಲರೂ ಮಾನವ ಧರ್ಮದಂತೆ ಬದುಕಬೇಕು ಎಂದು ಕಿವಿಮಾತು ಹೇಳಿದರು.
ಪ್ರತಿಯೊಬ್ಬರೂ ಗುರುಹಿರಿಯರ ಮಾರ್ಗದರ್ಶನದಲ್ಲಿ ಸಾಗಿದರೆ ಜೀವನ ಸಾರ್ಥಕವಾಗುತ್ತದೆ. ಹುಟ್ಟು ಸಾವಿನ ಮಧ್ಯದಲ್ಲಿ ಮಾನವೀಯ ಮೌಲ್ಯ ಅಳವಡಿಸಿಕೊಂಡು ಸಮಾಜ ಸೇವೆ ಮಾಡುವ ಗುಣ ಬೆಳಸಿಕೊಳ್ಳಬೇಕು ಎಂದರು.
ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿರುವ ಟ್ರಸ್ಟ್ ಅವರೆಲ್ಲರನ್ನೂ ಮುಖ್ಯವಾಹಿನಿಗೆ ತಂದಿದೆ. ಮುಂಬರುವ ದಿನಗಳಲ್ಲಿ ಮತಷ್ಟು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ವಿವಿಧ ಜಿಲ್ಲೆಗಳ 20ಕ್ಕೂ ಹೆಚ್ಚು ಸಾಧಕರಿಗೆ ಜನಸೇವಾ ರಾಜರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ. ಟಿಪ್ಪುವರ್ಧನ್, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಆರ್. ಪ್ರಮೋದ್‌ಕುಮಾರ್, ಕಸಾಪ ತಾಲೂಕು ಅಧ್ಯಕ್ಷ ಪ್ರದೀಪ್‌ಕುಮಾರ್, ಜನ್ಮಭೂಮಿ ರಕ್ಷಣಾ ವೇದಿಕೆ ಅಧ್ಯಕ್ಷ ೈರೋಜ್‌ಖಾನ್, ಸಣ್ಣಿ ಎಜುಕೇಷನ್ ಕಲ್ಚರಲ್ ಟ್ರಸ್ಟ್ ಅಧ್ಯಕ್ಷ ದೊಡ್ಡೇರಿಬೈಲಪ್ಪ, ಮನೋಜ್ಞ ಟ್ರಸ್ಟ್ ಅಧ್ಯಕ್ಷ ಬೂದಿಹಾಲ್‌ಕಿಟ್ಟಿ, ಚಲನಚಿತ್ರನಟರಾದ ಪ್ರಸಾದ್, ಎಂ. ವಿಜಯ್‌ಕುಮಾರ್, ಗಾಯಕ ಎಂ.ಟಿ. ಸ್ವಾಮಿ ಮತ್ತಿತರರು ಇದ್ದರು.