ಪುರಾಣ-ಪ್ರವಚನದಿಂದ ಜ್ಞಾನ ವೃದ್ಧಿ

ydg7
ಹುಣಸಗಿ ತಾಲೂಕಿನ ಕಲ್ಲದೇವನಹಳ್ಳಿ ಗ್ರಾಮದ ಖಾಸ್ಗತೇಶ್ವರ ಶಾಂತಾಶ್ರಮದಲ್ಲಿ ಹಮ್ಮಿಕೊಂಡಿ ಪುರಾಣ ಕಾರ್ಯಕ್ರಮಕ್ಕೆ ವಿರುಪಾP್ಷÀಯ್ಯ ದಿಗಳೂರು ಚಾಲನೆ ನೀಡಿದರು. ಸಿದ್ಧಲಿಂಗ ದೇವರು, ಅಮರಯ್ಯಸ್ವಾಮಿ ಜಾಲಿಬೆಂಚಿ, ಪರಶುರಾಮ ಚಟ್ನಳ್ಳಿ, ಯಲ್ಲಪ್ಪ ಗುಂಡಳ್ಳಿ, ಬಸನಗೌಡ ಬಿರಾದಾರ ಇತರರಿದ್ದರು.
Published on

ಹುಣಸಗಿ: ಪುರಾಣ-ಪ್ರವಚನ ಆಲಿಸುವುದರಿಂದ ನಮಲ್ಲಿ ಇನ್ನಷ್ಟು ಜ್ಞಾನ ವೃದ್ಧಿಯಾಗುತ್ತದೆ ಎಂದು ವಿರುಪಾಕ್ಷಯ್ಯ ದಿಗಳೂರು ಹೇಳಿದರು.
ತಾಲೂಕಿನ ಕಲ್ಲದೇವನಹಳ್ಳಿಯ ಖಾಸ್ಗತೇಶ್ವರ ಶಾಂತಾಶ್ರಮದ ವಾರ್ಷೀಕೊತ್ಸವ ಹಾಗೂ ವಿರಕ್ತ ಶಿವಯೋಗಿಗಳ ಎರಡನೇ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡ `ತಿಳಿದು ಬದುಕು'ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಹಣವಿದ್ದ ಅನೇಕರು ಉತ್ತಮ ಕೆಲಸಕ್ಕೆ ಬಳಕೆ ಮಾಡುವುದಿಲ್ಲ. ಆದರೆ ಬಡವರಾದರೂ ಅನೇಕರು ದುಡಿದ್ದರಲ್ಲಿಯೇ ಇತರರಿಗೆ ಹಂಚುತ್ತಾರೆ. ಇದು ಸಾರ್ಥಕ ಬದುಕು. ಯಾರು ಧರ್ಮ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಾರೋ ಅವರು ಭಗವಂತನ ಕರುಣೆಗೆ ಪಾತ್ರರಾಗುತ್ತಾರೆ ಎಂದು ಹೇಳಿದರು.

ತಾಳಿಕೋಟೆ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಮಾತನಾಡಿ, ದೇವರು ನಮಗೆ ನೀಡಿದ ಜನ್ಮ ಸಾರ್ಥಕ ಮಾಡಿಕೊಳ್ಳಲು ಆಸ್ತಿ, ಅಂತಸ್ತು ಬೇಕಾಗಿಲ್ಲ. ಇತತರ ಕಷ್ಟಗಳಿಗೆ ಸ್ಪಂದಿಸುವ ಹಾಗೂ ಮತ್ತೊಬ್ಬರ ಕಣ್ಣಿರು ಒರೆಸುವ ಗುಣ ನಮ್ಮಲ್ಲಿದ್ದರೇ ಅದುವೇ ಮುಖ್ಯ ಎಂದರು.
ಹಣ, ಆಸ್ತಿ ,ಬಂಗಾರ ಯಾವುದು ನಮ್ಮ ಜತೆಗೆ ಬರುವದಿಲ್ಲ. ನಮ್ಮ ಜೀವಿತ ಅವಧಿಯಲ್ಲಿ ಮಾಡಿದ ಸತ್ಕಾರ್ಯ ಹಾಗೂ ಒಳ್ಳೇಯ ನುಡಿ, ಮಾತ್ರ ನಮ್ಮ ಜೀವನದ ನಂತರವೂ ಸಮಾಜದಲ್ಲಿ ಶಾಶ್ವತವಾಗಿ ಉಳಿದುಕೊಳ್ಳುತ್ತದೆ. ಅಂತಹ ಸಮಾಜ ಮುಖಿ ಕಾರ್ಯ ಕಲ್ಲದೇವನಹಳ್ಳಿಯಲ್ಲಿ ನಡೆಯುತ್ತಿರುವು ಮಾದರಿಯಾಗಿದೆ ಎಂದರು.

ಕಲಾವಿದರಾದ ಅಮರಯ್ಯಸ್ವಾಮಿ ಜಾಲಿಬೆಂಚಿ, ಪರಶುರಾಮ ಚಟ್ನಳ್ಳಿ, ಯಲ್ಲಪ್ಪ ಗುಂಡಳ್ಳಿ, ಬಸನಗೌಡ ಬಿರಾದಾರ ಇದ್ದರು. ಕಲ್ಲದೇವನಹಳ್ಳಿ, ವಜ್ಜಲ, ಚನ್ನೂರು, ಹೆಬ್ಬಾಳ, ಕಚಕನೂರು, ಬೆನಕನಹಳ್ಳಿ, ದೇವತಕಲ್ಲ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net