ಪುರಾಣ ಪ್ರವಚನದಿಂದ ಕರ್ತವ್ಯ ಪ್ರಜ್ಞೆ ಎಚ್ಚರ

ydg10
Published on

ದೋರನಹಳ್ಳಿ: ಮನುಷ್ಯ ಭೂಮಿಗೆ ಬರುವಾಗ ದೇವರು ಕೊಟ್ಟ ಕರ್ತವ್ಯ ಪ್ರಜ್ಞೆ ಮರೆದಿರಲಿ ಎಂದು ಪುರಾಣ, ಪ್ರವಚನಗಳ ಮೂಲಕ ಎಚ್ಚರಿಸುತ್ತಾನೆ ಎಂದು ಯೋಗಿರತ್ನ ಸಿz್ದÉÃಶ್ವರ ಶಿವಾಚಾರ್ಯರು ನುಡಿದರು.

ಗ್ರಾಮದ ಶಾಂಭವಿಮಾತಾ ಚಿಕ್ಕಮಠದಲ್ಲಿ ದಸರಾ ಮಹೋತ್ಸವ ನಿಮಿತ್ತ ಗುರುವಾರ ಸಂಜೆ ಹಮ್ಮಿಕೊಂಡ ಗುಡ್ಡಾಪುರ ದಾನಮ್ಮದೇವಿ ಪುರಾಣಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು, ಮನುಷ್ಯನನ್ನು ಭೂಮಿಗೆ ಕಳಿಸುವಾಗ ದೇವರು ವಹಿಸಿದ ಜವಾಬ್ದಾರಿ ಪುರಾಣ, ಪ್ರವಚನ ಮತ್ತು ಧಾರ್ಮಿಕ ಉತ್ಸವಗಳ ಮೂಲಕ ಎಚ್ಚರಿಸುತ್ತಾನೆ ಎಂದರು.

ಹುಟ್ಟಿದಾಗ ಖಾಲಿಯಾಗಿ ಬಂದ ಮೆದುಳು ಹೋಗುವಾಗ e್ಞÁನ ಹೊತ್ತು ಹೋಗುತ್ತದೆ. ಮನುಷ್ಯನ ಜನ್ಮಕ್ಕೆ ಅರ್ಥ ಬರಲು ಗುರುವಿನ ಆಶ್ರಯ ಬೇಕೆ ಬೇಕು. ಮಠ, ಮಂದಿರದ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಜೀವನ ಸಾರ್ಥಕಮಾಡಿಕೊಳ್ಳಬೆಕು ಎಂದು ಹೇಳಿದರು.

ಮಠದ ಪೀಠಾಧಿಪತಿ ಶಿವಲಿಂಗರಾಜೇAದ್ರ ಶಿವಾಚರ್ಯರು ಆಶೀರ್ವಚನ ನೀಡಿ, ಪ್ರತಿ ವ್ಯಕ್ತಿಯ ಬದುಕಿನಲ್ಲಿ ಹತ್ತು ರಾತ್ರಿಗಳು ಬಹಳ ಮುಖ್ಯ. ಶಿವನ ಸ್ಮರಣೆಗೆ ಶಿವರಾತ್ರಿ, ದೇವಿ ಸ್ಮರಣೆಗೆ ನವರಾತ್ರಿ ದಿನಗಳು ಬಹಳ ಮುಖ್ಯವಾಗಿದ್ದು, ಈ ವೇಳೆ ಪುರಾಣ ಆಲಿಸುವುದರಿಂದ ಮನಸ್ಸು ಪ್ರಫುಲ್ಲಗೊಳ್ಳುತ್ತದೆ ಎಂದರು.

ಹಿರೇಮಠದ ಮಡಿವಾಳ ದೇವರು ಮಾತನಾಡಿದರು. ಈ ವೇಳೆ ನಿಂಗಣ್ಣಗೌಡ ಪೊಲೀಸ್ ಪಾಟೀಲï, ಮಹಮ್ಮದ್ ಮೊಸಬಾಯಿ, ನಿಂಗಣ್ಣ ಮುರದೊಡ್ಡಿ, ಕಲ್ಲಪ್ಪ ಖಾನಾಪುರ, ತಿಪ್ಪಣ್ಣ ಬಿರಾಳ್, ಸಂಗಣ್ಣ ಕರಿಸಂಗ, ಗೊ¯್ಲÁಳಪ್ಪ ಗೋಲಗೇರಿ, ಜಟ್ಟೆಪ್ಪ ಬಿರಾಳ್, ಯಲ್ಲಪ್ಪ ಹುಡೇದ್, ಯಂಕಪ್ಪ ತಂಗಡಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net