ಪುರಾಣ ಆಲಿಸುವುದರಿಂದ ಜೀವನ ಪಾವನ

ydg02
Published on

ಕೊಡೇಕಲ್: ಮಹಾತ್ಮರ ಪ್ರವಚನ, ಪುರಾಣ ಆಲಿಸುವುದರಿಂದ ಜೀವನ ಪಾವನವಾಗುತ್ತದೆ ಎಂದು ಬಸª Àಪೀಠಾಧಿಪತಿ ಶ್ರೀ ವೃಷಭೇಂದ್ರ ಅಪ್ಪ ನುಡಿದರು.

ಶ್ರಾವಣ ನಿಮಿತ್ತ ನೀಲಾಂಬಿಕಾ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡ ನಂದಿಯಾಗಮ ಲೀಲೆ ಪುರಾಣ ಕರ‍್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶ್ರಾವಣ ಮಾಸದಲ್ಲಿ ಮಹಾತ್ಮರ ಸುವಿಚಾರ ಆಲಿಸುವುದರಿಂದ ಮನಸ್ಸು ಶುದ್ಧವಾಗುತ್ತದೆ ಎಂದು ಹೇಳಿದರು.

ವೀರಸಂಗಪಯ್ಯನವರು ರಚಿಸಿದ ನಂದಿಯಾಗಮ ಲೀಲೆ ಪುರಾಣದ ಅರ್ಥವನ್ನು ಅಲ್ಲಮಪ್ರಭು ಸ್ವಾಮಿ ಕೊಡೇಕಲ್ಮಠ, ಬಿಡಿಸಿದರೆ, ವಿರೇಶ ಮುತ್ತಗಿ ಪುರಾಣ ಪಠಣ ಮಾಡಿದರು. ಶಾಮಸುಂದರ ಜೋಶಿ, ಕೃಷ್ಟಪ್ಪನಾಯಕ ದೊರಿ, ಈರಸಂಗಯ್ಯ ಸ್ವಾಮಿ, ವೀರಸಂಗಪ್ಪ ಹಾವೇರಿ, ರಂಗನಾಥ ದೋರಿ, ಬಸವರಾಜ ಹೊಸಪೂಜಾರಿ, ಬಸವರಾಜ ಗೋನಟಲ್, ವೀರಸಂಗಪ್ಪ ಅಂಬ್ಲಿಹಾಳ, ತಿಪ್ಪಣ್ಣ ದ್ಯಾಮನಾಳ ಸೋಮಲಿಂಗಪ್ಪ ದೊರಿ, ಬಸವರಾಜ ಜಾಲಿಗಿಡದ ಇತರರಿದ್ದರು. ಚನ್ನಬಸ್ಸು ಹುಣಸಿಗಿಡದ ಮತ್ತು ಬಸವರಾಜ ಪತ್ತಾರ ಸಂಗೀತ ಸೇವೆ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net