ಪುರಸಭೆಯಿಂದ ಬೀದಿ ಬದಿ ವ್ಯಾಪಾರಿಗಳಿಗೆ ಅಗತ್ಯ ಸೌಲಭ್ಯ

kdr sanmana
ಕಡೂರಿನ ಗಣಪತಿ-ಆಂಜನೇಯಸ್ವಾಮಿ ದೇವಸ್ಥಾನದ ಬೀದಿಬದಿ ವ್ಯಾಪಾರಿಗಳ ಸಂಘದಿಂದ ಶಾಸಕರು, ಪುರಸಭೆ ಅಧ್ಯಕ್ಷರು ಮತ್ತು ಸದಸ್ಯರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನು ಶಾಸಕ ಕೆ.ಎಸ್.ಆನಂದ್ ಉದ್ಘಾಟಿಸಿದರು. ಭಂಡಾರಿ ಶ್ರೀನಿವಾಸ್, ಮಂಜುಳಾ ಚಂದ್ರು, ಈರಳ್ಳಿ ರಮೇಶ್, ಮನು ಮರುಗುದ್ದಿ, ಯಾಸೀನ್, ಸುಧಾ ಉಮೇಶ್ ಇತರರಿದ್ದರು.
Published on

ಕಡೂರು: ಬೀದಿ ಬದಿ ವ್ಯಾಪಾರಸ್ಥರ ಬದುಕಿಗೆ ಅರ್ಥ ಕಲ್ಪಿಸಿಕೊಡುವ ಮೂಲಕ ಅಭಿವೃದ್ಧಿಗೆ ಪುರಸಭೆ ಶ್ರಮಿಸುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.

ಪಟ್ಟಣದ ಕೆಎಲ್‌ವಿ ವತ್ತದಲ್ಲಿ ಸೋಮವಾರ ಗಣಪತಿ-ಆಂಜನೇಯ ಸ್ವಾಮಿ ದೇವಸ್ಥಾನ ಬಳಿಯ ಬೀದಿ ಬದಿ ವ್ಯಾಪಾರಸ್ಥರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಪಟ್ಟಣದ ಕೆಎಲ್‌ವಿ ವೃತ್ತದ ಬದಿಯಲ್ಲಿರುವ ಬೀದಿ ಬದಿ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸದೆ ರಕ್ಷಣೆಗೆ ಪಣತೊಟ್ಟು ಹಾಗೂ ವಾಹನ ದಟ್ಟಣೆ ನಿಯಂತ್ರಿಸಲು ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಡಾಂಬರೀಕರಣ ಕಾಮಗಾರಿಯೊಂದಿಗೆ ಸುಸಜ್ಜಿತ ಜಾಗದ ವ್ಯವಸ್ಥೆಯನ್ನು ಪುರಸಭೆ ಅಧ್ಯಕ್ಷರು ಕಲ್ಪಿಸಿಕೊಟ್ಟಿದ್ದಾರೆ ಎಂದರು.

ಹಳೇ ಸಂತೆ ಜಾಗವನ್ನು ರಕ್ಷಣೆ ಮಾಡಿ ಸರ್ಕಾರದ ಜಾಗ ಉಳಿಸಿ ತಂತಿ ಬೇಲಿ ಹಾಕಿಸಿದ್ದಾರೆ. ಇದರಿಂದ ಪುರಸಭೆ ಆಸ್ತಿಯನ್ನು ಒತ್ತುವರಿದಾರರಿಂದ ರಕ್ಷಿಸಿರುವ ಅವರ ಆಡಳಿತವನ್ನು ಶ್ಲಾಸುತ್ತೇನೆ. ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಕೆಲಸ ಮಾಡುತ್ತಿದ್ದಾರೆ. ಆದಾಯವನ್ನೂ ಹೆಚ್ಚಿಸಿಕೊಂಡಿದ್ದು, ಇತ್ತೀಚೆಗೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಹೆಚ್ಚಿನ ಆದಾಯವನ್ನು ಪುರಸಭೆ ಪಡೆದುಕೊಂಡಿರುವುದು ಹೆಗ್ಗಳಿಕೆ ಎಂದು ಹೇಳಿದರು.

ಪಟ್ಟಣಕ್ಕೆ ಯುಜಿಡಿ ಸೌಲಭ್ಯ ನೀಡಲು 168 ಕೋಟಿ ರೂ. ಮೊತ್ತದಲ್ಲಿ ಯೋಜನೆಯ ರೂಪುರೇಷೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಿದ್ದು, 35 ಕೋಟಿ ರೂ. ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಹಣ ಬಿಡುಗಡೆಯಾದಾಕ್ಷಣ ಯುಜಿಡಿ ಕಾಮಗಾರಿ ಪ್ರಕ್ರಿಯೆಗೆ ಚಾಲನೆ ದೊರಕಲಿದೆ ಎಂದರು.

ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳಿಗೆ ಬದುಕು ಕಟ್ಟಿಕೊಡುವ ಕೆಲಸ ಮಾಡಬೇಕು ಎಂಬ ಅಚಲ ನಿರ್ಧಾರದಿಂದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ತೋರಿಸಲಾಗಿದೆ. ಕುಟುಂಬದ ನಿರ್ವಹಣೆಯಲ್ಲಿ ಹೈರಾಣಾಗುವ ಬೀದಿ ಬದಿ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸುವುದಿಲ್ಲ. ಅಭಿವೃದ್ಧಿ ಚಿಂತನೆ ಇಟ್ಟುಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.

ಯಾರೂ ಏನೇ ಹೇಳಿದರೂ ನಾನು ಬಡವರ ಪರವಾಗಿ ಕೆಲಸ ಮಾಡಿದ್ದೇನೆ. ರಾಜಕಾರಣದ ಜೀವನದಲ್ಲಿ ಬಡವರ ಸಮಸ್ಯೆಗಳನ್ನು ಅರ್ಥೈಸಿಕೊಂಡು ನನ್ನ ಪರಿಮಿತಿಯಲ್ಲಿ ಅಗತ್ಯ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ ಎಂದರು.

ಕಡೂರು ಶಾಸಕರಾಗಿದ್ದ ಕೆ.ಎಂ.ಕೃಷ್ಣಮೂರ್ತಿ, ವೈ.ಸಿ.ವಿಶ್ವನಾಥ್, ವೈಎಸ್‌ವಿ ದತ್ತ, ಬೆಳ್ಳಿಪ್ರಕಾಶ್, ಈಗ ಕೆ.ಎಸ್.ಆನಂದ್ ಅವರ ಸಲಹೆ ಪಡೆದು ಆಯಾ ಸಂದರ್ಭಗಳಲ್ಲಿ ಆಗಬೇಕಾದ ಅಭಿವದ್ಧಿಗೆ ಶ್ರಮಿಸಿದ್ದೇನೆ. ಅಭಿವದ್ಧಿ ಒಬ್ಬರಿಂದ ಸಾಧ್ಯ ಇಲ್ಲ. ಶಾಸಕರೊಂದಿಗೆ ಚರ್ಚಿಸಿ ಅನುದಾನ ಪಡೆದು ಅಭಿವದ್ಧಿ ಮಾಡಲಾಗಿದೆ ಎಂದು ಹೇಳಿದರು.

ಪುರಸಭೆ ಸದಸ್ಯ ತೋಟದಮನೆ ಮೋಹನ್‌ಕುಮಾರ್ ಮಾತನಾಡಿ, ಶಾಸಕ ಕೆ.ಎಸ್.ಆನಂದ್ ಅವರ ಕಾಳಜಿಯಿಂದ ಪಟ್ಟಣ ಅಭಿವದ್ಧಿ ಹೊಂದುತ್ತಿದೆ. ಮಾಜಿ ಶಾಸಕ ಕೆ.ಎಂ.ಕಷ್ಣಮೂರ್ತಿ ಅವರ ಹಾದಿಯಲ್ಲಿಯೇ ಶಾಸಕರು ಮುನ್ನಡೆಯಬೇಕು. ಶಾಸಕರು ಪುರಸಭೆಗೆ ಅನುದಾನ ನೀಡಿದರೆ ಅಭಿವದ್ಧಿಗೆ ಪೂರಕವಾಗಲಿದೆ ಎಂದರು.

ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಸದಸ್ಯರಾದ ಸೈಯಾದ್ ಯಾಸೀನ್, ಮರುಗುದ್ದಿ ಮನು, ಇಕ್ಬಾಲ್, ಸಂದೇಶ್‌ಕುಮಾರ್, ಸುಧಾ ಉಮೇಶ್, ಶ್ರೀಕಾಂತ್, ಮುಖಂಡರಾದ ಕೆ.ಬಿ.ಸೋಮೇಶ್, ಪಂಗ್ಲಿ ಮಂಜುನಾಥ್, ಬೀದಿಬದಿ ವ್ಯಾಪಾಸ್ಥರಾದ ಶಿವಣ್ಣ, ರಾಮಣ್ಣ, ಕುಮಾರ್, ಶೇಖರಪ್ಪ, ಯೋಗೀಶ್, ಫೈರೋಜ್, ಗೋವಿಂದಪ್ಪ, ತಂಗಲಿ ಕುಮಾರ್, ನಂಜುಂಡಿ, ಶ್ರೀನಿವಾಸ್, ಚಂದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net