ಪುರಸಭೆ ಸದಸ್ಯ ರಂಗನಾಥ್ ಲೋಕಾಯುಕ್ತ ಬಲೆಗೆ

TKE T.M.RANGANATH)
ಟಿ.ಎಂ.ರಂಗನಾಥ್
Published on

ತರೀಕೆರೆ: ಪುರಸಭೆ ಕಾಂಗ್ರೆಸ್ ಸದಸ್ಯ ಟಿ.ಎಂ.ರಂಗನಾಥ್ ಮಂಗಳವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕಡೂರಿನ ವ್ಯಾಪಾರಿಯೊಬ್ಬರು ಪಟ್ಟಣ ಹೊರವಲಯದಲ್ಲಿ ನಿರ್ಮಿಸುತ್ತಿರುವ ಶೆಡ್‌ವೊಂದರ ವ್ಯಾಪಾರೋದ್ಯಮ ಪರವಾನಗಿ ನೀಡಲು 50 ಸಾವಿರ ರೂ. ಲಂಚ ಪಡೆಯುವಾಗ ಚಿಕ್ಕಮಗಳೂರು ಲೋಕಾಯುಕ್ತರು ಟಿ.ಎಂ.ರಂಗನಾಥ್ ಅವರನ್ನು ಬಂಧಿಸಿದರು.

ವ್ಯಾಪಾರಿಯೊಬ್ಬರು ಪಟ್ಟಣ ಹೊರವಲಯದ ಪೆಟ್ರೋಲ್ ಬಂಕ್ ಬಳಿ ಗ್ರಾನೈಟ್ ವ್ಯಾಪಾರಕ್ಕಾಗಿ ಶೆಡ್ ನಿರ್ಮಿಸುತ್ತಿದ್ದು, ಅದರ ಪರವಾನಗಿ ನೀಡುವ ಸಲುವಾಗಿ 3ನೇ ವಾರ್ಡ್ ಸದಸ್ಯ ಟಿ.ಎಂ.ರಂಗನಾಥ್ 1 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಮುಂಗಡ 50 ಸಾವಿರ ರೂ. ಪಡೆಯುವಾಗ ಮಾಜಿ ಅಧ್ಯಕ್ಷ ಟಿ.ಕೆ.ರಮೇಶ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಜೆ.ಜೆ.ತಿರುಮಲೇಶ್ ನೇತೃತ್ವದಲ್ಲಿ ಲೋಕಾ ಪೊಲೀಸರ ತಂಡ ಟಿ.ಎಂ.ರಂಗನಾಥ್ ಅವರನ್ನು ಬಂಧಿಸಿತು.

ಕಾರ್ಯಾಚರಣೆಯಲ್ಲಿ ಮುಖ್ಯ ಪೇದೆಗಳಾದ ಸಿ.ಲೋಕೇಶ್, ವಿಜಯಭಾಸ್ಕರ್, ಪೇದೆಗಳಾದ ಎಂ.ಪ್ರಸಾದ್, ಚಂದ್ರ ಶೆಟ್ಟಿ, ಮುಜೀಬ್ ಖಾನ್, ಶ್ರೀಧರ್, ಸವಿನಯ, ಮಲ್ಲಿಕಾರ್ಜುನ್, ಚಂದನ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net