ಪುರಸಭೆ ಮುಖ್ಯಾಧಿಕಾರಿ ನಿಯೋಜನೆ ವಿಳಂಬ

08 KAMPLI 02
Published on

ಕಂಪ್ಲಿ: ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ನಿವೃತ್ತಿಯಾಗಿ ಒಂಬತ್ತು ದಿನಗಳಾದರೂ ಬೇರೊಬ್ಬ ಮುಖ್ಯಾಧಿಕಾರಿ ನಿಯೋಜನೆಯಾಗಿಲ್ಲ.

ಮುಖ್ಯಾಧಿಕಾರಿಯಾಗಿದ್ದ ಕೆ.ದುರುಗಣ್ಣ ಮೇ.31ರಂದು ನಿವೃತ್ತಿಯಾದರು. ಆ ಬಳಿಕ ಮುಖ್ಯಾಧಿಕಾರಿ ಸ್ಥಾನಕ್ಕೆ ಬೇರೆಯವರ ನಿಯೋಜನೆಯಾಗಿಲ್ಲ. ಇದರಿಂದಾಗಿ ಪುರಸಭೆಯಿಂದ ಸಾರ್ವಜನಿಕರಿಗೆ ದೊರೆಯುವ ಸೌಲಭ್ಯಗಳು ವಿಳಂಬವಾಗುತ್ತಿವೆ. ಆಡಳಿತಾತ್ಮಕ ತೊಂದರೆಗಳು ಎದುರಾಗಿವೆ.

ಪುರಸಭೆ 23ವಾರ್ಡ್‌ಗಳಿಗೆ ಚುನಾವಣೆ ನಡೆದು 2019ರ ನ.14 ರಂದು ಫಲಿತಾಂಶ ಪ್ರಕಟಗೊಂಡಿತ್ತು. ಆದರೆ, ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅಧಿಕಾರ ಸ್ವೀಕಾರಕ್ಕೆ ಒಂದು ವರ್ಷ ಬೇಕಾಯಿತು. 2020ರ ನ.6ರಂದು ಅಧ್ಯಕ್ಷೆ, ಉಪಾಧ್ಯಕ್ಷರ ಚುನಾವಣೆ ನಡೆಯಿತು. ಅಧ್ಯಕ್ಷ, ಉಪಾಧ್ಯಕ್ಷರ ಮೊದಲ ಅವಧಿ 2023ರ ಮೇ.12ರಂದು ಮುಗಿದ ಬಳಿಕ ಎಸಿ ಆಡಳಿತಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದರು. ಇದೀಗ ಮುಖ್ಯಾಧಿಕಾರಿ ಇಲ್ಲದೆ ಒಂಬತ್ತು ದಿನಗಳಾದರೂ ಹೊಸ ಮುಖ್ಯಾಧಿಕಾರಿ ನಿಯೋಜನೆಯ ಸುಳಿವಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net