ಪುರಸಭೆ ನಡೆಗೆ ಮಾಜಿ ಶಾಸಕ ತೆಲ್ಕೂರ ಆಕ್ರೋಶ

PH 05
Published on

ಸೇಡಂ: ಪಟ್ಟಣದ ಸಮೀಪದ ಸೇಡಂ ಕಲಬುರಗಿ ಮುಖ್ಯ ರಸ್ತೆ ಬದಿಯ ಗೂಡಂಗಡಿ ತೆರವು ಕಾರ್ಯಾಚರಣೆ ವೇಳೆ ಪುರಸಭೆ ಅಧಿಕಾರಿಗಳು, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ ಘಟನೆ ಮಂಗಳವಾರ ನಡೆಯಿತು.

ಗೂಡಂಗಡಿ ತೆರವು ಮಾಡುತ್ತಿದ್ದ ಸ್ಥಳಕ್ಕೆ ಮಾಜಿ ಶಾಸಕ ತೆಲ್ಕೂರ ಆಗಮಿಸಿ, ಯಾವ ಕಾರಣಕ್ಕೆ ತೆರವು ಮಾಡಲಾಗುತ್ತಿದೆ ಎಂದು ಕಾರಣ ನೀಡಿ ಎಂದು ಆಗ್ರಹಿಸಿ, ಪಟ್ಟು ಹಿಡಿದರು. ಬಿಜೆಪಿ ಕಾರ್ಯಕರ್ತರು, ಸಾರ್ವಜನಿಕರು ಜಮಾಯಿಸಿ ರಸ್ತೆ ತಡೆ ನಡೆಸಿದರು.

ಈ ವೇಳೆ ಮಾತನಾಡಿದ ಮಾಜಿ ಶಾಸಕ ತೆಲ್ಕೂರ, ಪಟ್ಟಣದ ವಾಸವದತ್ತ ಸಿಮೆಂಟ್ ಕಾರ್ಖಾನೆಯಿಂದ ಕಲಬುರಗಿ ವೃತ್ತದವರೆಗೆ ಅನಧಿಕೃತ ಗೂಡಂಗಡಿ ಇದ್ದು, ಸರ್ವಿಸ್ ರಸ್ತೆಯಲ್ಲೂ ಅಂಗಡಿಗಳಿವೆ. ರಸ್ತೆಯುದ್ದಕ್ಕೂ ಲಾರಿ, ವಾಹನ ನಿಲ್ಲಿಸಲಾಗುತ್ತಿದೆ. ಇದರಿಂದ ಅಪಘಾತ ಹೆಚ್ಚುತ್ತಿವೆ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಎಎಸ್ಪಿ ಶ್ರೀನಿಧಿ, ಸಹಾಯಕ ಆಯುಕ್ತ ಆಶಪ್ಪ ಪೂಜಾರಿ ಹಾಗೂ ಡಿವೈಎಸ್ಪಿ ಕೆ.ಬಸವರಾಜ ಆಗಮಿಸಿ ಮಾಜಿ ಶಾಸಕ ರಾಜಕುಮಾರ ತೆಲ್ಕೂರ ಮನವೊಲಿಕೆಗೆ ಮುಂದಾದರು. ಮುಖಂಡರಾದ ಮುಕುಂದ ದೇಶಪಾಂಡೆ, ವಿಜಯಕುಮಾರ ಆಡಕಿ, ರಾಜು ಕಟ್ಟಿ, ಮಲಕಪ್ಪ ಕೊಡದೂರ, ವೀರೇಶ ಹೂಗಾರ, ಶಿವಾನಂದ ಸ್ವಾಮಿ, ಮಲ್ಲಿಕಾರ್ಜುನಸ್ವಾಮಿ ಬಿಬ್ಬಳ್ಳಿ, ರಾಘವೇಂದ್ರ ಮೆಕ್ಯಾನಿಕ್, ಶಿವಕುಮಾರ ನೂಲಾ, ಮಹಾವೀರ ಅಳ್ಳೊಳ್ಳಿ, ವೀರಭದ್ರಯ್ಯ ಸ್ವಾಮಿ, ರವಿ ನಾಯಕ್, ಶ್ರೀಮಂತ ಅವಂಟಿ, ಚಂದ್ರಶೇಖರ ಗಚ್ಚಿನಮಠ, ಬಸಣ್ಣ ರನ್ನೆಟ್ಲಾ, ಸಿದ್ದು ಊಡಗಿ, ಸಂದೀಪ ಪ್ಯಾಟಿ, ರಾಜಶೇಖರ ಪಾಟೀಲ್, ಚಂದ್ರು ಪಾಟೀಲ್ ತರನಳ್ಳಿ, ಪ್ರಕಾಶ ಅನ್ನರ್, ನಿತ್ಯಾನಂದ ವಾಲಿಕಾರ, ಸಾಗರ ಕಲಕಂಬ, ಅನೀಲ ರನ್ನೆಟ್ಲಾ, ನಾಗರಾಜ ಹಾಬಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net