ಯಾದಗಿರಿ : ಪುರುಷರ ಬಟ್ಟೆ ಧರಿಸಿ ಬಂದ ತೃತೀಯ ಲಿಂಗಿಗೆ ಟಿಕೆಟ್ ನೀಡಲು ಕಂಡಕ್ಟರ್ ಪರದಾಡಿದ ಪ್ರಸಂಗ ಬುಧವಾರ ನಡೆದಿದೆ.
ರಾಜ್ಯ ಸರಕಾರ ಮಹಿಳೆ, ಯುವತಿಯರು ಹಾಗೂ ತೃತೀಯ ಲಿಂಗಿಗಳಿಗೆ ಸಾರಿಗೆ ಬಸ್ಗಳಲ್ಲಿ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ್ದು, ಬುಧವಾರ ರಾಯಚೂರುನಿಂದ ಯಾದಗಿರಿಗೆ ಬರುತ್ತಿದ್ದ ಸಾರಿಗೆ ಬಸ್ನಲ್ಲಿ ಪ್ಯಾಂಟ್, ಶಟರ್್ ಧರಿಸಿದ ಹತ್ತಿದ್ದ ತೃತೀಯ ಲಿಂಗಿ ತನಗೂ ಸಹ ಉಚಿತ ಟಿಕೆಟ್ ನೀಡುವಂತೆ ಕಂಡಕ್ಟರ್ಗೆ ಆಧಾರ್ ಕಾಡರ್್ ತೋರಿಸಿದ್ದಾರೆ.
ಆಧಾರ್ನಲ್ಲಿ ಮಹಿಳೆಯ ಹೆಸರಿರುವ ಪುರುಷನ ಪೋಟೋ ಕಂಡು ಗೊಂದಲಕ್ಕೀಡಾದ ಕಂಡಕ್ಟರ್, ಕೆಲಹೊತ್ತು ಕಕ್ಕಾಬಿಕ್ಕಿಯಾಗಿದ್ದಾರೆ. ಅಲ್ಲದೆ ಪುರುಷರ ಬಟ್ಟೆ ಹಾಕಿದ್ದೀರಿ, ಹೆಸರು ಲಕ್ಷ್ಮೀ ಅಂತಾ ಇದೆ. ಅದೇಗೆ ಮಹಿಳೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ನಾನು ಮಹಿಳೆಯರ ಬಟ್ಟೆ ಹಾಕಿಕೊಳ್ಳಲ್ಲ, ಯಾವಾಗಲೂ ಪುರುಷರ ಬಟ್ಟೆನೆ ಧರಿಸುತ್ತೇನೆ ಎಂದು ಲಕ್ಷ್ಮೀ ಉತ್ತರಿಸಿದ್ದಾರೆ. ಕೊನೆಗೂ ಕಂಡಕ್ಟರ್ಗೆ ಗೊಂದಲ ನಿವಾರಣೆಯಾಗಿ ಶಕ್ತಿ ಯೋಜನೆಯಡಿ ಟಿಕೆಟ್ ನೀಡಿದ್ದಾರೆ.
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅನುಕೂಲತೆ ಸಿಕ್ಕ ನಂತರ ಚಾಲಕ, ನಿವರ್ಾಹಕರಿಗೆ ಆಗಾಗ ಇಂಥ ಶಾಕ್ ಹೊಡೆಯುವ ಪ್ರಸಂಗ ನಡೆಯುತ್ತಲೇ ಇರುವುದು ಸತ್ಯ.