

ಮಾಂಜರಿ: ಸಮೀಪದ ಯಡೂರ ಗ್ರಾಮದಲ್ಲಿ ವೀರಭದ್ರ ದೇವರ ಗುಗ್ಗುಳೋತ್ಸವ ಮತ್ತು ಭದ್ರಕಾಳಿ-ವೀರಭದ್ರ ದೇವರ ಕಲ್ಯಾಣ ಮಹೋತ್ಸವ ಹಾಗೂ ಪುರವಂತರ ಮಹಾಮೇಳ ಶನಿವಾರ ವಿಜೃಂಭಣೆಯಿಂದ ಜರುಗಿತು.
ಪುರವಂತರ ವೈವಿಧ್ಯಮಯ ಕಲೆ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ವೀರಭದ್ರೇಶ್ವರ ದೇವರ ನಾಮಾವಳಿ ಹೇಳುತ್ತಾ, ಹರಿತವಾದ ಖಡ್ಗ, ವಿವಿಧ ಆಯುಧಗಳನ್ನು ಗಾಳಿಯಲ್ಲಿ ಝಳಪಿಸುತ್ತಿದ್ದರು. ಸಲಾಕೆ ಮತ್ತು ದಾರವನ್ನು ಕೆನ್ನೆ, ತುಟಿಗಳಲ್ಲಿ ಹಾಯಿಸಿಕೊಂಡರು. ಕೆಲವರು ತಮ್ಮ ಅಂಗೈ, ಬೆನ್ನು, ಪಕ್ಕೆ, ಕಿವಿ, ಹೊಟ್ಟೆ, ಭಾಗದಲ್ಲಿಯೂ ಚುಚ್ಚಿಕೊಂಡು ಭಕ್ತಿ ಮೆರೆದರು.