

ಚಿತ್ರದುರ್ಗ: ನಟ ಪುನೀತ್‌ರಾಜ್‌ಕುಮಾರ್ ಅವರ ಮಾನವೀಯತೆ, ಸಮಾಜಸೇವೆ ಯುವ ಜನರಿಗೆ ಪ್ರೇರಣೆಯಾಗಿದೆ ಎಂದು ಜಿಲ್ಲಾಸ್ಪತ್ರೆ ಡಿಎಸ್ ಡಾ.ಎಸ್.ಪಿ. ರವೀಂದ್ರ ಹೇಳಿದರು.
ಚಿತ್ರದುರ್ಗ ತಾಲೂಕು ಆರ್ಯ ಈಡಿಗ ಸಂಘ ಮತ್ತು ಪುನೀತ್ ರಾಜ್ಕುಮಾರ್ ಅಭಿಮಾನಿ ಬಳಗ ನಗರದ ಜಿಲ್ಲಾಸ್ಪತ್ರೆ ಬಳಿ ಬುಧವಾರ ಆಯೋಜಿಸಿದ್ದ ಕರ್ನಾಟಕ ರತ್ನ, ಡಾ. ಪುನೀತ್‌ರಾಜ್‌ಕುಮಾರ್ ಅವರ 4ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜಕ್ಕಾಗಿ ಕೆಲಸ ಮಾಡುವ ಮನಸ್ಸು ಇರಬೇಕು. ಪುನೀತ್ ಅವರ ಜೀವನ ಇದಕ್ಕೆ ಮಾದರಿ. ಅವರು ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಯುವಜನರಿಗೆ ಅವರ ಆದರ್ಶಗಳು ಪ್ರೇರಣೆಯಾಗಲಿ ಎಂದರು.
ಡಿಎಆರ್ ಡಿವೈಎಸ್‌ಪಿ ಶ್ರೀನಿವಾಸ್ ಮಾತನಾಡಿ, ಪುನೀತ್ ಅವರ ಸಾಮಾಜಿಕ ಕಳಕಳಿಯನ್ನು ಸ್ಮರಿಸಿದರು. ಪುನೀತ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಆಸ್ಪತ್ರೆ ಸಿಬ್ಬಂದಿ, ರೋಗಿಗಳು ಹಾಗೂ ಅವರ ಬಂಧುಗಳಿಗೆ ಉಪಹಾರ ವಿತರಿಸಲಾಯಿತು.
ಆರ್ಯ ಈಡಿಗ ಸಂಘದ ಇ.ಎನ್. ಲಕ್ಷ್ಮೀಕಾಂತ್, ಲಕ್ಷ್ಮೀನಾರಾಯಣ್, ಶ್ರೀನಿವಾಸ್, ಶಿವಕುಮಾರ್, ಉದಯ್, ಗುರು, ಜೆ. ಮಂಜುನಾಥ್, ಯೋಗೇಶ್, ಚಂದ್ರು, ಮೃತ್ಯುಂಜಯ, ನವೀನ್, ಸಂತೋಷ್, ಸುರೇಶ್, ಅಭಿ, ಎಲ್. ನಿಂಗೇಶ್, ಪ್ರಸನ್ನಬಾಬು, ಡಿ. ಮಂಜುನಾಥ್, ಪುನೀತ್‌ರಾಜ್‌ಕುಮಾರ್ ಅಭಿಮಾನಿ ಬಳಗದ ಸುರೇಂದ್ರ, ಎಸ್. ರಾಘವೇಂದ್ರ ಇತರರು ಇದ್ದರು.