ಪುನೀತ್‌ಕುಮಾರ್‌ಗೆ ವಿಕ್ರಂ ಶ್ರೀ-2022 ಪ್ರಶಸ್ತಿ

HUN-NOV-27-5(BODY BUILDING COMPTITION)
ಹುಣಸೂರು ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಆಯೋಜಿಸಿದ್ದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮೈಸೂರಿನ ಪುನೀತ್ ಕುಮಾರ್ ವಿಕ್ರಂ ಶ್ರೀ ಪ್ರಶಸ್ತಿಗೆ ಭಾಜನರಾದರು. ಡಾ.ಶ್ರೀನಾಥ್, ಮಣಿ ಇದ್ದರು.
Published on

ಹುಣಸೂರು: ನಗರದ ನ್ಯೂ ವಿಕ್ರಂ ಜಿಮ್‌ನ 8ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಅಂತರ ಜಿಲ್ಲಾ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಮೈಸೂರಿನ ಪುನೀತ್‌ಕುಮಾರ್ ವಿಕ್ರಂ ಶ್ರೀ-2022 ಪ್ರಶಸ್ತಿಗೆ ಭಾಜನರಾದರು.

ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ಸ್ಪರ್ಧೆಯಲ್ಲಿ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ತಾಲೂಕಿನ ಬೀಜನಗಹಳ್ಳಿಯ ಸ್ಪರ್ಧಿ ಕೆಂಡ ಪ್ರಥಮ ಸ್ಥಾನದೊಂದಿಗೆ ಸ್ನೇಹಜೀವಿ ಕ್ಲಾಸಿಕ್-2022 ಕಪ್ ಗಳಿಸಿದರು. ಬೆಸ್ಟ್ ಫೋಸರ್ ಕಪ್ ಅನ್ನು ಕಟ್ಟೆಮಳಲವಾಡಿಯ ಸುದೀಪ್ ಹಾಗೂ ಬೆಸ್ಟ್ ಮಸಲ್ ಮ್ಯಾನ್ ಕಪ್‌ಅನ್ನು ನಗರದ ಲಕ್ಷ್ಮಣ್ ಪಡೆದರು.

ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದ ಶಾಸಕ ಎಚ್.ಪಿ.ಮಂಜುನಾಥ್‌ರ ಪುತ್ರ ಪವನ್, ಯುವ ಜನಾಂಗ ಯಾವುದೇ ದುಶ್ಚಟಗಳಿಗೆ ಬಲಿಯಾಗದೆ, ತಮ್ಮ ದೇಹ ಹಾಗೂ ಮನಸನ್ನು ಸದೃಢವಾಗಿಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ವಿಕ್ರಂ ಜೀಮ್ ಮಾಲೀಕ ಮಹದೇವ ಮಾತನಾಡಿದರು. ತೀರ್ಪುಗಾರರಾಗಿ ಮೈಸೂರು ಜಿಲ್ಲಾ ಅಮೆಚೂರು ಬಾಡಿ ಬಿಲ್ಡಿಂಗ್ ಸಂಸ್ಥೆಯ ನವೀನ್‌ಚಂದ್ರ, ಮೋಹನ್, ನಿತಿನ್, ಬಸವರಾಜು ಹಾಗೂ ನಜೀರ್ ಪಾಲ್ಗೊಂಡಿದ್ದರು. ನಗರಸಭಾ ಮಾಜಿ ಲಕ್ಷ್ಮಣ್, ಡಿವೈಎಸ್‌ಪಿ ರವಿಪ್ರಸಾದ್, ನಗರಸಭಾ ಸದಸ್ಯರಾದ ರಮೇಶ್, ಮನು, ಮುಖಂಡರಾದ ಡಾ.ಶ್ರೀನಾಥ್, ಜಿಮ್‌ನ ರವಿಕುಮಾರ್, ಉದಯ್, ಅರ್ಜುನ್, ದಿಲೀಪ್ ಇದ್ದರು. 80ಕ್ಕೂ ಹೆಚ್ಚು ದೇಹದಾರ್ಢ್ಯ ಪಟುಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net