

ಮೈಸೂರು: ರೋಟರಿ ಜಿಲ್ಲಾ ಆರೋಗ್ಯ ಸಿರಿ ಯೋಜನೆ ಮತ್ತು ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ರೋಟರಿ ಜಯಪ್ರಕಾಶ್ ನಗರ ಮೈಸೂರು ವತಿಯಿಂದ ಜೀವಧಾರ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ನ.26ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2ರ ವರೆಗೆ ಜೆ.ಪಿ ನಗರದ ಡಾ.ಪುಟ್ಟರಾಜ ಗವಾಯಿ ಕ್ರೀಡಾಂಗಣದ ಯೋಗ ಮತ್ತು ಧ್ಯಾನ ಕೇಂದ್ರದಲ್ಲಿ ಆಯೋಜಿಸಲಾಗಿದೆ.
ಮಾಜಿ ಕ್ರಿಕೆಟ್ ಆಟಗಾರ ಜಾವಗಲ್ ಶ್ರೀನಾಥ್ ಶಿಬಿರವನ್ನು ಉದ್ಘಾಟಿಸುವರು. ನಗರಪಾಲಿಕೆ ಸದಸ್ಯೆ ಶಾರದಮ್ಮ ಈಶ್ವರ್, ಕ್ಲಬ್‌ನ ಪದಾಧಿಕಾರಿಗಳಾದ ಎಚ್.ಆರ್.ಕೇಶವ್, ಆರ್.ವೆಂಕಟೇಶ್ ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಮಾಹಿತಿಗೆ ಮೊ.9844481972, 988062725 ಸಂಪರ್ಕಿಸಬಹುದು ಎಂದು ರೋಟರಿ ಜಯಪ್ರಕಾಶ್ ನಗರ ಮೈಸೂರು ಅಧ್ಯಕ್ಷ ಡಾ.ಮುಳ್ಳೂರು ನಂಜುಂಡಸ್ವಾಮಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.