ಪುನೀತ್​ ರಾಜಕುಮಾರ್​ ಪುತ್ಥಳಿ ತೆರವು

21_12_
Published on

ಸ್ಥಾಪನೆಗೆ ಅನುಮತಿ ನೀಡದ ಗ್ರಾಪಂ,ಪೊಲೀಸರ ಸಮ್ಮುಖದಲ್ಲಿ ಕಾರ್ಯಾಚರಣೆ

ತಿಪಟೂರು: ಅನಾವರಣಗೊಳ್ಳಬೇಕಿದ್ದ ಡಾ.ಪುನೀತ್​ ರಾಜಕುಮಾರ್​ ಪುತ್ಥಳಿಗೆ ತಾಲೂಕಿನ ಹೊನ್ನವಳ್ಳಿ ಗ್ರಾಮ ಪಂಚಾಯಿತಿ ಅನುಮತಿ ನಿರಾಕರಿಸಿದ ಬೆನ್ನಲ್ಲೇ ಪೊಲೀಸರು ಪುತ್ಥಳಿಯನ್ನು ತೆರವುಗೊಳಿಸಿದ್ದು, ಅಪು$್ಪ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ರಕ್ಷಣಾ ವೇದಿಕೆ, ಅಪ್ಪುಸೇನೆಯಿಂದ ಕಲ್ಪತರು ನಾಡಿನ ಕನ್ನಡದ ಹಬ್ಬದ ಪ್ರಯುಕ್ತ ಡಾ.ಪುನಿತ್​ ರಾಜಕುಮಾರ್​ ಪುತ್ಥಳಿಯನ್ನು ತಾಲೂಕಿನ ಹೊನ್ನವಳ್ಳಿ ಗ್ರಾಮದ ಬಸ್​ ನಿಲ್ದಾಣದ ಬಳಿ ಡಿ.22ರಂದು ಅನಾವರಣಗೊಳಿಸಲು ಸಕಲ ಸಿದ್ಧತೆ ನಡೆದಿತ್ತು. ಪ್ರತಿಮೆ ಅನಾವರಣಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೂ ಆಹ್ವಾನ ನೀಡಲಾಗಿತ್ತು. ಈ ಸಂಬಂಧ ಕಾರ್ಯಕ್ರಮಕ್ಕೆ ಇನ್ನೂ 10&-12 ದಿನ ಬಾಕಿ ಇರುವಾಗಲೇ ಡಿವೈಎಸ್​ಪಿ ವಿನಾಯಕ್​ ಶಟಗೇರಿ ಅವರಿಗೆ ಪುತ್ಥಳಿ ಅನಾವರಣದ ವಿಷಯ ತಿಳಿಸಿ, ಕಾರ್ಯಕ್ರಮಕ್ಕೆ ಅಂತಿಮ ಹಂತದ ಸಿದ್ಧತೆ ಸಹ ನಡೆಸಲಾಗಿತ್ತು. ಈ ನಿಟ್ಟಿನಲ್ಲಿ ಬಸ್​ ನಿಲ್ದಾಣದ ಬಳಿ ಗುರುವಾರ ರಾತ್ರಿ 11-.30ರ ಸುಮಾರಿಗೆ ಪುನಿತ್​ ಪುತ್ಥಳಿ ಪ್ರತಿಷ್ಠಾಪಿಸಲಾಗಿತ್ತು. ಸಿದ್ಧತೆ ನಡೆಯುವ ವೇಳೆ ಸುಮ್ಮನಿದ್ದ ಗ್ರಾಮ ಪಂಚಾಯಿತಿ ಮತ್ತು ಪೊಲೀಸ್​ ಇಲಾಖೆ ಈಗ ಅನುಮತಿ ನಿರಾಕರಿಸಿ, ಶುಕ್ರವಾರ ಬೆಳಗ್ಗೆ ಏಕಾಏಕಿ ಪುನೀತ್​ ಪುತ್ಥಳಿ ತೆರವುಗೊಳಿಸಿದ್ದು, ಅಪು$್ಪ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಪಂಗೆ ನೀಡಿದ್ದ ಕಡತವೇ ನಾಪತ್ತೆ: ಕಾರ್ಯಕ್ರಮದ ಸ್ಥಳ ಸ್ವಚ್ಛಗೊಳಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ಸಂಘಟನೆಯ ಕಾರ್ಯಕರ್ತರು ಗ್ರಾಪಂಗೆ ಎರಡು ದಿನ ಮುಂಚೆ ನೀಡಿದ್ದ ಮನವಿ ನಾಪತ್ತೆಯಾಗಿದ್ದು, ವೇದಿಕೆ ಕಾರ್ಯಕರ್ತರು ಮನವಿ ಕೊಟ್ಟಿದ್ದು ನಿಜ, ಅದನ್ನು ಅಧ್ಯಕ್ಷರು/ಪಿಡಿಒ ಅವರ ಕಚೇರಿ ಮೇಜಿನಲ್ಲಿಟ್ಟಿದ್ದೆವು ಎಂದು ಕಚೆೇರಿ ಸಿಬ್ಬಂದಿ ಹೇಳುತ್ತಾರೆ. ಆದರೆ ಅಧ್ಯಕ್ಷರು ನಾನು ಪರಸ್ಥಳದಲ್ಲಿದ್ದೇನೆ. ನನಗೆ ಈ ವಿಚಾರ ಗೊತ್ತಿಲ್ಲ ಎಂದರೆ, ಪಿಡಿಒ ಕರ್ತವ್ಯದ ಮೇಲೆ ಬೆಂಗಳೂರಿಗೆ ಹೋಗಿದ್ದೆ, ನನಗೂ ಪತ್ರದ ವಿಚಾರ ಗೊತ್ತಿಲ್ಲ ಎನ್ನುತ್ತಿದ್ದಾರೆ. ಮನವಿ ಸ್ವೀಕರಿಸಿದ ಕುರಿತ ದಾಖಲೆಯೂ ಕಚೇರಿಯ ಕಡತದಲ್ಲಿ ನಮೂದಾಗಿಲ್ಲದಿರುವುದನ್ನು ಗಮನಿಸಿದರೆ ಅನುಮತಿ ನಿರಾಕರಣೆಗೆ ಬೇರೆಯೇ ಕಾರಣ ಇದ್ದಂತಿದೆ.

ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪುತ್ಥಳಿ, ಪ್ರತಿಮೆ ಸ್ಥಾಪನೆಗೆ ಅವಕಾಶವಿಲ್ಲ. ಛಲವಾದಿ ಮಹಾಸಭಾ ಪ್ರಧಾನ ಕಾರ್ಯದರ್ಶಿ ಅವರ ಅರ್ಜಿ ಮತ್ತು ಜಿಲ್ಲಾಡಳಿತ/ತಾಲೂಕು ಆಡಳಿತ ಮತ್ತು ಸ್ಥಳಿಯ ಆಡಳಿತದಿಂದ ಕಾರ್ಯಕ್ರಮ ಆಯೋಜಿಸಲು ಅನುಮತಿ ಇಲ್ಲದ ಕಾರಣ ಮತ್ತು ಮೇಲಧಿಕಾರಿಗಳ ಮೌಖಿಕ ಆದೇಶದನ್ವಯ ಸದರಿ ಕಾರ್ಯಕ್ರಮಕ್ಕೆ ಅವಕಾಶ ನೀಡಬಾರದು ಎಂದು ಪಂಚಾಯಿತಿ ಪಿಡಿಒ ಶಿವನಂಜೇಗೌಡ ಹೊನ್ನವಳ್ಳಿ ಆರಕ್ಷಕ ಉಪನಿರೀಕ್ಷಕರಿಗೆ ಪತ್ರ ಬರೆದಿದ್ದಾರೆ. ಸಾಮಾಜಿಕ ಮತ್ತು ಸಾಂಸತಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಲು ನಾವು ಬದ್ಧ, ಆದರೆ ಈ ಕುರಿತ ಮನವಿ ನಮಗೆ ತಲುಪಿಲ್ಲ ಮತ್ತು ಸಭೆಯಲ್ಲಿ ಅನುಮತಿ ನೀಡುವ ಕುರಿತ ಚರ್ಚೆ ಆಗದಿರುವುದರಿಂದ ಗೊಂದಲವಾಗಿದೆ. ತುರ್ತು ಸಭೆ ಕರೆದು ಸದಸ್ಯರು ಒಪ್ಪಿಗೆ ನೀಡಿದರೆ ಅನುಮತಿ ನೀಡುವ ಕುರಿತು ಪರಿಶೀಲಿಸಬಹುದು.

| ದೊಡ್ಡೇಗೌಡ, ಅಧ್ಯಕ್ಷ ಹೊನ್ನವಳ್ಳಿ ಗ್ರಾಪಂ

ಶುಕ್ರವಾರ ಬೆಳಗ್ಗೆ ಪೊಲೀಸರು ಮಂಟಪದಿಂದ ತೆರವುಗೊಳಿಸಿದ ಪುನೀತ್​ ಪುತ್ಥಳಿಯನ್ನು ಗ್ರಾಮ ಪಂಚಾಯಿತಿ ಸುಪರ್ದಿಗೆ ಒಪ್ಪಿಸಿದ್ದು, ಪಿಡಿಒ ಕಚೇರಿ ಒಳಗೆ ಇಟ್ಟಿದ್ದಾರೆ. ಪುತ್ಥಳಿ ಅನಾವರಣಕ್ಕೆ ಅವಕಾಶ ನೀಡದಿದ್ದರೂ ಪರವಾಗಿಲ್ಲ. ಈಗಾಗಲೇ ಕಾರ್ಯಕ್ರಮದ ಸಿದ್ಧತೆಗಳು ಬಹುತೇಕ ಮುಗಿದಿದ್ದು, ಗಣ್ಯರು ಆಗಮಿಸಲು ಒಪ್ಪಿರುವುದರಿಂದ ವೇದಿಕೆ ಕಾರ್ಯಕ್ರಮಕ್ಕೆ ಅನುಮತಿ ನೀಡಿ, ಕನ್ನಡ ಸೇವೆಗೆ ಸಹಕರಿಸಲಿ.

| ಆರ್​.ವಿಜಯ್​ಕುಮಾರ್​ ಸಿದ್ದಾಪುರ ರಾಜ್ಯಾಧ್ಯಕ್ಷ, ಕರವೇ ಅಪು$್ಪಸೇನೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net