ಪುತ್ರನ ಪರ ಅನುಪಮಾ ಪ್ರಚಾರ

Screenshot_20230411_151415
ಹೊಳೆನರಸೀಪುರ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಕೆಪಿಸಿಸಿ ಸದಸ್ಯ ಅನುಪಮಾ ಮಹೇಶ್ ಅವರು ಮತ ಪ್ರಚಾರ ನಡೆಸಿದರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್ ಟಿ ಲಕ್ಷ್ಮಣ್ ಕಾಂಗ್ರೆಸ್ ಮುಖಂಡ ಬಾಗೇಳು ಮಂಜೇಗೌಡ ಹಾಗೂ ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರು ಇದ್ದರು.
Published on

ಹೊಳೆನರಸೀಪುರ: ಪಟ್ಟಣದ ಹೇಮಾವತಿ ಬಡಾವಣೆ, ಪೇಟೆ ಬೀದಿ, ಹಾಸನ ಮುಖ್ಯರಸ್ತೆ, ದೇವಾಂಗ ಬೀದಿ ಸೇರಿದಂತೆ ಇತರ ಬಡಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಎಂ.ಪಟೇಲ್ ಅವರ ತಾಯಿ ಕೆಪಿಸಿಸಿ ಸದಸ್ಯೆ ಅನುಪಮಾ ಮಹೇಶ್ ಮಂಗಳವಾರ ಪುತ್ರನ ಪರವಾಗಿ ಬಿರುಸಿನ ಮತ ಬೇಟೆ ನಡೆಸಿದರು.

ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಜತೆಗೂಡಿ ಬಡಾವಣೆಯ ನಾಗರಿಕರನ್ನು ಭೇಟಿ ಮಾಡಿ ಪ್ರಚಾರ ನಡೆಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಟಿ. ಲಕ್ಷ್ಮಣ್, ಪುರಸಭೆ ಮಾಜಿ ಅಧ್ಯಕ್ಷ ಎಚ್.ವಿ. ಪುಟ್ಟರಾಜು, ಕಾಂಗ್ರೆಸ್ ಮುಖಂಡ ಬಾಗಿಹಾಳು ಮಂಜೇಗೌಡ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net