ಪುತ್ತೂರು ಶ್ರೀ ಮಹಾಲಿಂಗೇಶ್ವರನಿಗೆ ಭಕ್ತರಿಂದಲೇ ಬಿಲ್ವಾರ್ಚಣೆ ಸಮರ್ಪಣಾ ಅವಕಾಶ ನೀಡಿದ ನೂತನ ವ್ಯವಸ್ಥಾಪನಾ ಸಮಿತಿ

Published on

ದೇವಳದ ತುಳಸಿಕಟ್ಟೆಯ ಬಳಿ ಶ್ರೀ ದೇವರ ಭಾವಚಿತ್ರ ಇರಿಸಿ ದೊಡ್ಡದಾದರ ಹರಿವಾಣಕ್ಕೆ ಭಕ್ತರು ಬಿಲ್ವಪತ್ರೆ ಅರ್ಪಿಸಬೇಕು. ವೈದಿಕರು ಬಳಿಕ ಅದನ್ನು ಶ್ರೀ ದೇವರಿಗೆ ಸಮರ್ಪಣೆ ಮಾಡಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ದೇವಳದ ಪ್ರಧಾನ ಅರ್ಚಕ ಕೆ.ವೆಂಕಟೇಶ್ ಸುಬ್ರಹ್ಮಣ್ಯ ಭಟ್ ದೇವಳದ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.

ಶಿವನ ಅತ್ಯಂತ ಪ್ರಿಯವಾದ ಬಿಲ್ವಪತ್ರೆಯನ್ನು ಶಿವಲಿಂಗಕ್ಕೆ ಅರ್ಪಿಸದೆ ಪೂಜೆ ಪೂರ್ಣವಾಗದು. ಶಿವಲಿಂಗಕ್ಕೆ ಬಿಲ್ವಪತ್ರೆಯನ್ನು ಅರ್ಪಿಸುವುದರ ಮೂಲಕ ಮಹಾದೇವನು ಸಂತಸಗೊಂಡು ಭಕ್ತನು ಬಯಸಿದ ಫಲವನ್ನು ನೀಡುತ್ತಾರೆ ಎಂಬ ಧಾರ್ಮಿಕ ನಂಬಿಕೆ. ಪ್ರತಿ ವರ್ಷ ಭಕ್ತರು ಬಿಲ್ವಾರ್ಚಣೆ ಸೇವಾ ರಶೀದಿ ಮಾಡುತ್ತಾರೆ. ಆದರೆ ಅವರಿಗೆ ಬಿಲ್ವಪತ್ರೆಯನ್ನು ಅಪರ್ಣೆ ಮಾಡುವ ಅವಕಾಶ ಇರಲಿಲ್ಲ. ಆದರೆ ಈ ವರ್ಷ ದೇವಳದ ನೂತನ ವ್ಯವಸ್ಥಾಪನಾ ಸಮಿತಿಯು ಪುತ್ತೂರು ಶ್ರೀ ಮಹಾಲಿಂಗೇಶ್ವರನಿಗೆ ಭಕ್ತರಿಂದಲೇ ಬಿಲ್ವಾರ್ಚಣೆ ಸಮರ್ಪಣಾ ಅವಕಾಶ ನೀಡಿರುವುದು ವಿಶೇಷ.

*ಭಕ್ತರಿಂದಲೇ ಬಿಲ್ವಾರ್ಚಣೆ ಸಮರ್ಪಣೆ

ಗುರುವಾರ ಪ್ರಾತಃಕಾಲದಿಂದಲೇ ವಿಶೇಷ ಪೂಜಾ ಕಾರ್ಯಕ್ರಮಗಳು ಆರಂಭಗೊಂಡು ಭಕ್ತರ ಸಂಖ್ಯೆ ಅಧಿಕವಾಗಿತ್ತು. ದೇವಳದ ತಂತ್ರಿ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆದ ಉತ್ಸವದಲ್ಲಿ ಬೆಳಿಗ್ಗೆ ಶತರುದ್ರಾಭಿಷೇಕ, ಬಿಲ್ವಾರ್ಚನೆ, ಭಜನೆ, ರುದ್ರ ಪಾರಾಯಣ ಮೊದಲಾದ ವಿಶೇಷ ಸೇವೆಗಳು ನಡೆಯಿತು. ದೇವಳದ ಹೊರಾಂಗಣ ಗೋಪುರದಲ್ಲಿ ವಿವಿಧ ಭಜನಾ ಮಂಡಳಿಗಳಿಂದ ನಿರಂತರ ಭಜನಾ ಕಾರ್ಯಕ್ರಮ ನಡೆಯಿತು.

ಪುತ್ತೂರು: ಅಭಿಷೇಕ ಪ್ರಿಯ ಎಂದೇ ಖ್ಯಾತನಾದ ಶಿವನಿಗೆ ಮಾ.೧೧ರಂದು ಶಿವರಾತ್ರಿಯ ಸಂಭ್ರಮ. ಲಿಂಗರೂಪಿ ಶಿವನನ್ನು ಆರಾಧಿಸುವ ಪುಣ್ಯದಿನ. ಮಹಾಶಿವರಾತ್ರಿಯ ದಿನದಂದು ಈಶ್ವರನ ದೇವಾಲಯಗಳಲ್ಲಿ ವಿಶೇಷ ಆರಾಧನೆಗಳು ನಡೆಯುತ್ತಿದ್ದು, ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರನಿಗೆ ಭಕ್ತರಿಂದಲೇ ಬಿಲ್ವಾರ್ಚಣೆ ಸಮರ್ಪಣಾ ಅವಕಾಶ ನೂತನ ವ್ಯವಸ್ಥಾಪನಾ ಸಮಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net