ಪುತ್ತೂರಿನಿಂದ ಹೊರಟ ಪ್ರವೀಣ್ ನೆಟ್ಟಾರು ಅಂತಿಮ ಶವಯಾತ್ರೆ, ಹಿಂದೂ ಕಾರ್ಯಕರ್ತರಿಂದ ಘೋಷಣೆ, ಆಕ್ರೋಷ

dfghj
ಬಿಜೆಪಿ ಯುವ ಮೋರ್ಚಾ ಜಿಲ್ಲಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಬರ್ಬರ ಹತ್ಯೆ
Published on

ಪುತ್ತೂರು: ದುಷ್ಕರ್ಮಿಗಳಿಂದ ಬರ್ಬರ ಹತ್ಯೆಯಾದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ಮೃತ ಶರೀರದ ಶವಯಾತ್ರೆ ಪುತ್ತೂರಿನಿಂದ ಆರಮಭಗೊಂಡಿದೆ. ಪುತ್ತೂರು ಸರ್ಕಾ ಆಸ್ಪತ್ರೆಯಿಂದ ಮೆರವಣಿಗೆಯಲ್ಲಿ ಹೊರಟು ದರ್ಬೆ, ಸವಣೂರು ಕಾಣಿಯೂರು, ನಿಂತಿಕಲ್ಲು ಮೂಲಕ ಬೆಳ್ಳಾರೆಗೆ ಪ್ರವೀಣ್ ಅವರ ಮೃತದೇಹವನ್ನು ಕೊಂಡೊಯ್ಯಲು ಹಿಂದೂ ಸಂಘಟನೆಗಳು ಹಾಗೂ ಬಂಧು ಬಳಗದವರು ನಿರ್ಧರಿಸಿದ್ದು, ದಾರಿಯುದ್ದಕ್ಕೂ ಪೊಲೀಸ್ ಸರ್ಪಗಾವಳು ಇದೆ.
ದಾರಿಯದ್ದಕ್ಕೂ ವಾಹನ ಸಂಚಾರ ನಿಲ್ಲಿಸಿ, ಅಂಗಡಿ ಬಂದ್ ಮಾಡಲು ಹಿಂದೂ ಪರ ಸಂಘಟನೆಗಳು ಕರೆ ನೀಡಿದ್ದಾರೆ. ಪುತ್ತೂರು, ಬೆಳ್ಳಾರೆಯ ಆಯಕಟ್ಟಿನ ಜಾಗದಲ್ಲಿ ಹೆಚ್ಚುವರಿ ಪೋಲೀಸರನ್ನು ನಿಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net