ಪುತ್ತೂರಿನಲ್ಲಿ ಬೆಳ್ಳಂ ಬೆಳಗ್ಗೆ ಜೆಸಿಬಿ ಸದ್ದು ! – ಅಕ್ರಮ ನಿರ್ಮಾಣದ ಅಂಗಡಿಗಳ ತೆರವು ಮಾಡಿದ ನಗರಸಭೆ

IMG-20210723-WA0003
Published on

ಪುತ್ತೂರು: ಪುತ್ತೂರು‌ ನಗರಸಭೆ ವ್ಯಾಪ್ತಿಯಲ್ಲಿ ಬೀದಿ ಬದಿಯಲ್ಲಿ ಅಕ್ರಮವಾಗಿ ನಿರ್ಮಾಣವಾದ ಅಂಗಡಿಗಳ ತೆರವು ಕಾರ್ಯಾಚರಣೆ ಜು.23 ರಂದು ಬೆಳಗ್ಗೆ ನಸುಕಿನ ಜಾವ ನಗರಸಭೆ ಅಧಿಕಾರಿಗಳ ನೇತೃತ್ವದಲ್ಲಿ ನಡೆಯಿತು.

ಯಾವುದೇ ಅನುಮತಿಯಿಲ್ಲದೆ ವ್ಯಾಪಾರ ಚಟುವಟಿಯನ್ನು ಮುಂದುವರಿಸುತ್ತಿದ್ದವರಿಗೆ ಅಧಿಕಾರಿಗಳು ಈ ಮೂಲಕ ಬಿಸಿ ಮುಟ್ಟಿಸಿದ್ದಾರೆ.

ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್ ಅವರ ನೇತೃತ್ವದಲ್ಲಿ ಅಧಿಕಾರಿಗಳ ಉಪಸ್ಥಿತಿಯಲ್ಲಿ ಪೊಲೀಸ್ ಬಂದೋಬಸ್ತ್ ನೊಂದಿಗೆ ನಗರಸಭೆ ವ್ಯಾಪ್ತಿಯ ಹಲವೆಡೆ ಅಕ್ರಮವಾಗಿ ನಿರ್ಮಾಣಗೊಂಡ ಣ್ಣ ಪುಟ್ಟ ಅಂಗಡಿಗಳ ತೆರವು ಕಾರ್ಯಾಚರಣೆ ನಡೆಯಿತು.
ತಳ್ಳು ಗಾಡಿ ಬಿಟ್ಟು ಅಕ್ರಮ ನಿರ್ಮಾಣ ತೆರವು:
ತಳ್ಳು ಗಾಡಿಯ ಅನುಮತಿ ಪಡೆದು ಅಕ್ರಮ ಕಟ್ಟಡ ನಿರ್ಮಿಸಿದವರ ಕಟ್ಟಡ ತೆರವು ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net