ಪುಣ್ಯಾಮೃತಗೆ ಮಿಸ್ ಟೀನ್ ಸೌತ್ ಇಂಡಿಯಾ ಪಟ್ಟ

21 Punyamrutha
Published on

ಮೈಸೂರು: ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಯಶ್ ಇಂಟರ್‌ನ್ಯಾಷನಲ್ ಫ್ಯಾಷನ್ ವೀಕ್ ಸೌಂದರ್ಯ ಸ್ಪರ್ಧೆಯಲ್ಲಿ ಬಿ.ಎಸ್.ಪುಣ್ಯಾಮೃತಗೆ ಮಿಸ್ ಟೀನ್ ಸೌತ್ ಇಂಡಿಯಾ 2022 ಪಟ್ಟ ದೊರೆತಿದೆ.

9 ಸ್ಪರ್ಧಿಗಳಿದ್ದರು. ಈ ಪೈಕಿ ಕೇವಲ ಕಳೆದೊಂದು ವರ್ಷದಿಂದ ಮಾಡೆಲಿಂಗ್‌ನಲ್ಲಿ ತೊಡಗಿರುವ, 5.8 ಅಡಿ ಎತ್ತರ ಇರುವ ಪುಣ್ಯಾಮೃತ ಎಲ್ಲ ಸುತ್ತಿನಲ್ಲೂ ಉತ್ತಮ ಪ್ರದರ್ಶನ ನೀಡಿ, ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿ ಪಟ್ಟ ತಮ್ಮದಾಗಿಸಿಕೊಂಡಿದ್ದಾರೆ. ಈ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾಗುವ ಮುನ್ನ ಪುಣ್ಯಾಮೃತ ಮಿಸ್ ಟೀನ್ ಮೈಸೂರು ಮತ್ತು ಮಿಸ್ ಟೀನ್ ಇಂಡಿಯಾ 2022 ಸೇರಿದಂತೆ ಎರಡೂ ಸ್ಪರ್ಧೆಗಳಲ್ಲಿ ರನ್ನರ್ ಅಪ್ ಆಗಿ ಹಾಗೂ ಎರಡೂ ಸ್ಪರ್ಧೆಗಳಲ್ಲಿ ವಿಜೇತರಾಗಿ ಹೊರಹೊಮ್ಮಿದ್ದರು.

ತಮ್ಮ ಗೆಲುವಿನ ಬಗ್ಗೆ ಮಾತನಾಡಿದ ಪುಣ್ಯಾಮೃತ, ‘ನನ್ನ ಹೆಸರು ಘೋಷಣೆಯಾದಾಗ ಒಂದು ಕ್ಷಣ ನನಗೆ ಏನೂ ತೋಚಲಿಲ್ಲ. ಏನು ಮಾಡಬೇಕೆಂದು ತಿಳಿಯಲಿಲ್ಲ. ಇದು ಕಠಿಣ ಸ್ಪರ್ಧೆ. ಏಕೆಂದರೆ ನನ್ನೊಂದಿಗೆ ಸ್ಪರ್ಧಿಸಿದ್ದ ಎಲ್ಲರೂ ಈಗಾಗಲೇ ರಾಷ್ಟ್ರಮಟ್ಟದ ವಿವಿಧ ಸೌಂದರ್ಯ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದವರು. ಎಲ್ಲರೂ ಪ್ರತಿಭಾವಂತರು’ ಎಂದು ತಮ್ಮ ಅನುಭವ ಹಂಚಿಕೊಂಡರು.

ಪ್ರಸ್ತುತ ಅವರು ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿಕಾಂ ಮೊದಲ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ. ಕೆ.ಶೇಖರ್ ಹಾಗೂ ಕೆ.ರತ್ನಾ ಅವರ ಮಗಳು ಪುಣ್ಯಾಮೃತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net