

ಕಾಗವಾಡ: ತಾಲೂಕಿನ ಕುಸನಾಳ-ಮೊಳವಾಡ ಗ್ರಾಮದ ಸೀಮೆಯಲ್ಲಿರುವ ಉತ್ತರವಾಹಿಣಿ ಪುಣ್ಯಕ್ಷೇತ್ರ ಶ್ರೀವಿಠ್ಠಲ-ರುಕ್ಮೀಣಿ ಮಂದಿರದಲ್ಲಿ ಡಿ.16ರಿಂದ 22ರ ವರೆಗೆ ಹಬಪ ಕೃಷ್ಣ ಮಹಾರಾಜರ ಪುಣ್ಯಸ್ಮರಣೆ ಸುವರ್ಣ ಮಹೋತ್ಸವದ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಡಿ.16ರಂದು ಕಾರ್ಯಕ್ರಮವನ್ನು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಉದ್ಘಾಟಿಸುವರು. ವಿಜಯಪುರ ಜ್ಞಾನಯೋಗಾಶ್ರಮದ ಬಸಲಿಂಗ ಶ್ರೀಗಳು, ಪಂಡರಪುರದ ಬ್ರಹ್ಮಚೇತನ ಸದ್ಗುರು, ಹಬಪ ಶ್ರೀ ವಿಠ್ಠಲ ವಾಸಕರ ಮಹಾರಾಜರು, ನಂದಿಕುರಳಿಯ ವೀರಭದ್ರ ಶ್ರೀಗಳು, ಸದಲಗಾದ ಶ್ರದ್ಧಾನಂದ ಶ್ರೀಗಳು, ಬಾ.ಸೌಂದತ್ತಿಯ ಶಿವಶಂಕರ ಶ್ರೀಗಳು, ಪಂಡರಪುರದ ಬ್ರಹ್ಮಚೇತನ ಸದ್ಗುರು, ಹಬಪ ನಾಮದೇವ ವಾಸಕರ ಮಹಾರಾಜರು ಮತ್ತು ಗುರವರ್ಯ ಹಬಪ ಬಾಬಾಸಾಹೇಬ ಬಿಸಲೆ ಮಹಾರಾಜರು ಸಾನ್ನಿಧ್ಯ ವಹಿಸುವರು.
ಶಾಸಕ ರಾಜು ಕಾಗೆ ಅಧ್ಯಕ್ಷತೆ ವಹಿಸುವರು. ನಿತ್ಯ ಧಾರ್ಮಿಕ ಕಾರ್ಯಕ್ರಮ, ಭಜನಾ ಕಾರ್ಯಕ್ರಮ, 5,001 ಜನರಿಂದ ಶ್ರೀ ಗ್ರಂಥರಾಜ ಜ್ಞಾನೇಶ್ವರ ಪಾರಾಯಣ, ಮಹಾಪ್ರಸಾದ ವ್ಯವಸ್ಥೆ, ಡಿ.22 ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದು ಸುಭಾಷ ಶೇವಾಳೆ ಮಹಾರಾಜರು ತಿಳಿಸಿದ್ದಾರೆ.