ಪುಣ್ಯಭೂಮಿ ಕಾನ್ವೆಂಟ್ ವಾರ್ಷಿಕೋತ್ಸವ

punya bhoomi
Published on

ಹುಬ್ಬಳ್ಳಿ: ಭಾರತ ಶಿಕ್ಷಣ ಸಂಸ್ಥೆಯ ಬಿಡನಾಳದ ಪುಣ್ಯಭೂಮಿ ಕಾನ್ವೆಂಟ್​ನ ವಾರ್ಷಿಕ ಸ್ನೇಹ ಸಮ್ಮೇಳನ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಬೆಂಡಿಗೇರಿ ಮಾತನಾಡಿ, ಮುಂಬರುವ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಮೌಲ್ಯಾಂಕಿತ ಶಿಕ್ಷಣದ ಜತೆಗೆ ಉಚಿತವಾಗಿ ಟ್ಯೂಷನ್ ಕ್ಲಾಸ್ ನಡೆಸುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.

ನಿಂಗಪ್ಪ ಮೊರಬದ, ವೀರಭದ್ರಪ್ಪ ಮೇಟಿ, ಕಾಡಯ್ಯ ಬಾವಿಮಠ, ಬಿ.ಎಸ್. ಬಿರಾದಾರ, ಗುರುಸಿದ್ದಪ್ಪ ಸಂಶಿ ಅತಿಥಿಗಳಾಗಿ ಆಗಮಿಸಿದ್ದರು. ರಾಹುತ್ ಹಾಗೂ ಚಂದ್ರಶೇಖರಗೌಡ ಪಾಟೀಲ ಅವರನ್ನು ಗೌರವಿಸಲಾಯಿತು.

ಶಿಕ್ಷಕಿಯರಾದ ನಿರ್ಮಲಾ ಅಯ್ಯನಗೌಡ, ಕೌಸರ ಪಲ್ಲಾ ಹಾಗೂ ಅರುಣಾ ಅವರ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಿಕ್ಷಕಿಯರಾದ ಸಬೀನಾ ಮುಲ್ಲಾನವರ, ವಿದ್ಯಾ, ಯಶೋಧಾ ಹೊಸಪೇಟೆ, ಸುಜಾತಾ ಮೊರಬದ ಇತರರು ಇದ್ದರು. ಸ್ವಾತಿ ಬಡಿಗೇರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net