

ಹೊಸಕೋಟೆ: ನಗರದಲ್ಲಿ ಅತಿಹೆಚ್ಚು ವಾಹನದಟ್ಟಣೆ, ಸುಗಮ ಸಂಚಾರಕ್ಕೆ ಅಡಚಣೆ ದಿನೇದಿನೆ ಹೆಚ್ಚಾಗುತ್ತಿದೆ. ಹಿನ್ನೆಲೆಯಲ್ಲಿ ನಗರದ ಕೆ.ಆರ್. ರಸ್ತೆ ಅತಿಕ್ರಮಣ ಮಾಡಿ ಕಟ್ಟಡ ನಿರ್ಮಿಸಿದ್ದವರಿಗೆ, ಪಾದಚಾರಿ ರಸ್ತೆಯಲ್ಲಿ ಅಂಗಡಿಗಳನಿಟ್ಟು ವ್ಯಾಪಾರ ಮಾಡುತಿದ್ದವರಿಗೆ ಬುಧವಾರ ನಗರಸಭೆ ಶಾಕ್ ನೀಡಿತು.
ಅತಿಕ್ರಮವಾಗಿ ರಸ್ತೆ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದ ವಾಣಿಜ್ಯ ಕಟ್ಟಡಗಳು, ಪಾದಚಾರಿ ರಸ್ತೆಯಲ್ಲಿ ತಾತ್ಕಾಲಿಕ ಅಂಗಡಿ ನಿರ್ಮಿಸಿದ್ದವರ ಅಂಗಡಿಗಳನ್ನು ಜೆಸಿಬಿ ಬಳಸಿ ತೆರವುಗೊಳಿಸಲಾಯಿತು.
ನಗರದ ಅಭಿವೃದ್ಧಿ ಹಿನ್ನೆಲೆಯಲ್ಲಿ ಒತ್ತುವರಿ ಜಾಗ ತೆರವು ಮಾಡಲಾಗುತ್ತಿದೆ. ಇದಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ಬೀದಿಬದಿ ವ್ಯಾಪಾರಿಗಳಿಗೆ ಸ್ವಲ್ಪ ಸಮಸ್ಯೆಯಾಗಿದೆ. ನಗರದ ಎಂವಿ ಬಡಾವಣೆಯ ಕಾಲೇಜು ರಸ್ತೆ ಬಳಿಯ ಉದ್ಯಾನದ ಬಳಿ ವ್ಯಾಪಾರಕ್ಕೆ ಅನುವು ಮಾಡುಕೊಡಲಾಗುವುದು. ಅರುಣ್ ಕುಮಾರ್, ನಗರಸಭೆ ಅದ್ಯಕ್ಷ ಕೆ.ಆರ್. ರಸ್ತೆಯನ್ನು 1.70 ಕೋಟಿ ರೂ. ವೆಚ್ಚದಲ್ಲಿ ಮಾದರಿ ರಸ್ತೆಯಾಗಿ ಅಬಿವೃದ್ಧಿಪಡಿಸಲಾಗುವುದು. ರಸ್ತೆ ವಿಭಜಕ ನಿರ್ಮಿಸಿ, ಪಾದಚಾರಿ ಮಾರ್ಗ ವ್ಯವಸ್ಥೆಗೊಳಿಸಲಾಗುವುದು. ರಮೇಶ್, ನಗರಸಭೆ ಆಯುಕ್ತ