

ಕುಶಾಲನಗರ : ಕುಶಾಲನಗರ ಪುರಸಭೆ ವತಿಯಿಂದ ಪಟ್ಟಣದ ಹಲವು ಕಡೆ ಪುಟ್‌ಪಾತ್‌ಗಳಿಗೆ ಇಂಟರ್‌ಲಾಕ್ ಅಳವಡಿಸುವ ಕಾಮಗಾರಿ ಭರದಿಂದ ಸಾಗಿದೆ. ಪೋಸ್ಟ್ ಆಫೀಸ್ ಸಮೀಪದಲ್ಲಿ ಕಾಮಗಾರಿಯನ್ನು ಭಾನುವಾರ ಪುರಸಭಾ ಸದಸ್ಯ ಆನಂದಕುಮಾರ್ ವೀಕ್ಷಣೆ ಮಾಡಿದರು. ಉತ್ತಮ ಗುಣಮಟ್ಟದ ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ಈಗಾಗಲೇ ತಿಳಿಸಲಾಗಿದೆ. ಅದರಂತೆ ಕಾಮಗಾರಿ ನಡೆಯುತ್ತಿದೆ. ಪಟ್ಟಣದ ಅಂದ ಹೆಚ್ಚಿಸಲು ಕಪ್ಪು ಮತ್ತು ಕೆಂಪು ಬಣ್ಣದ ಇಂಟರ್‌ಲಾಕ್ ಅಳವಡಿಸಲಾಗುತ್ತಿದೆ.