ಪುಟ್ಟರಾಜ ಪ್ರಶಸ್ತಿಗೆ ಶಿವಸ್ವಾಮಿ ಆಯ್ಕೆ

Shivu swamy
Published on

ಬೀದರ್: ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘದಿಂದ ಜಿಲ್ಲೆಯ ಅಂಧ ಕಲಾವಿದರಿಗೆ ಕೊಡಮಾಡುವ ಪುಟ್ಟರಾಜ ಪ್ರಶಸ್ತಿಗೆ ಪ್ರಸಕ್ತ ಸಾಲಿನಲ್ಲಿ ಹಿರಿಯ ಕಲಾವಿದ, ಸಂಗೀತ ಶಿಕ್ಷಕ ಶಿವಸ್ವಾಮಿ ಚೀನಕೇರಿ ಅವರನ್ನು ಆಯ್ಕೆ ಮಾಡಲಾಗಿದೆ.

ಹುಮನಾಬಾದ್ ತಾಲೂಕಿನ ಚೀನಕೇರಿ ನಿವಾಸಕ್ಕೆ ತೆರಳಿದ ಸಂಘದ ಪ್ರಮುಖರು ಶಿವಸ್ವಾಮಿ ಅವರಿಗೆ ಪ್ರಶಸ್ತಿಯನ್ನು ಸ್ವೀಕರಿಸಲು ಆಹ್ವಾನಿಸಲಾಯಿತು. ಶಿವಸ್ವಾಮಿ ಅವರ ಸಂಗೀತ ಕ್ಷೇತ್ರದಲ್ಲಿನ ಸೇವೆ ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸ್ವಾಗತ ಸಮಿತಿ ಅಧ್ಯಕ್ಷ ಚಂದ್ರಶೇಖರ ಹೆಬ್ಬಾಳೆ, ಸಂಘದ ಅಧ್ಯಕ್ಷ ಪ್ರೊ.ಎಸ್.ವಿ.ಕಲ್ಮಠ, ಪ್ರಮುಖರಾದ ಡಾ. ಬಿ.ಎಸ್. ಬಿರಾದಾರ , ಬಾಬುರಾವ ಮಡಿವಾಳ, ಕಂಟೆಪ್ಪ ಗಂದಿಗುಡಿ , ವೈಜನಾಥ ಸಜ್ಜನಶೆಟ್ಟಿ ಇತರರಿದ್ದರು.

ಮಾರ್ಚ್ 12ರಂದು ನಗರದ ರಂಗಮಂದಿರದಲ್ಲಿ ಸಂಘದಿಂದ ಏರ್ಪಡಿಸಿರುವ ಪಂಚಾಕ್ಷರ ಗವಾಯಿಗಳ 76ನೇ ಪುಣ್ಯತಿಥಿ, ಡಾ.ಪುಟ್ಟರಾಜ ಕವಿ ಗವಾಯಿ 10ನೇ ಪುಣ್ಯತಿಥಿ ಹಾಗೂ ಸಂಘದ 18ನೇ ವಾರ್ಷಿಕೋತ್ಸವದಲ್ಲಿ ಶಿವಸ್ವಾಮಿ ಅವರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ . ಪ್ರಶಸ್ತಿಯು 5 ಸಾವಿರ ರೂ. ನಗದು, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ ಒಳಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net