ಪುಂಡರ ವೀಲಿಂಗ್ ಹುಚ್ಚಾಟಕ್ಕೆ ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ

ಪುಂಡರ ವೀಲಿಂಗ್ ಹುಚ್ಚಾಟಕ್ಕೆ ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ
Published on

ಹಾಸನ :ಪುಂಡರ ಬೈಕ್ ವೀಲಿಂಗ್ ಹುಚ್ಚಾಟದಿಂದ ಅಪಘಾತ ಸಂಭವಿಸಿದ್ದು, ಅಮಾಯಕ ಇಬ್ಬರು ವಿದ್ಯಾರ್ಥಿನಿಯರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ರಾತ್ರಿ ನಗರದ ಸಾಲಗಾಮೆ ರಸ್ತೆಯ ಸಹ್ಯಾದ್ರಿ ಚಿತ್ರಮಂದಿರ ಬಳಿ ಘಟನೆ ನಡೆದಿದೆ.

ದ್ವಿತೀಯ ಬಿ.ಎ.ಓದುತ್ತಿರುವ ಭೂಮಿಕಾ, ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸಿಂಚನಾ ಗಾಯಾಳುಗಳು. ವೀಲಿಂಗ್ ಮಾಡಿ ಅಪಘಾತಕ್ಕೆ ಕಾರಣವಾದ ನಗರದ 17 ವರ್ಷದ ಅಪ್ರಾಪ್ರ ಮತ್ತು ಬೇಲೂರು ತಾಲ್ಲೂಕಿ ಮಹಮ್ಮದ್‌ಪುರ ಗ್ರಾಮದ ಶಕೀರ್ ಅಹಮ್ಮದ್ (23) ಇಬ್ಬರಿಗೂ ಸಾರ್ವಜಕರು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬುಧವಾರ ರಾತ್ರಿ ನಗರದ ಸಾಲಗಾಮೆ ರಸ್ತೆಯ ಫುಡ್‌ಕೋರ್ಟನಲ್ಲಿ ಊಟ ಮುಗಿಸಿಕೊಂಡು ಬೈಕ್‌ನಲ್ಲಿ ಭೂಮಿಕಾ, ಸಿಂಚನಾ ಎಂಬ ಇಬ್ಬರು ಯುವತಿಯರು ಮನೆಗೆ ಮರಳುತ್ತಿದ್ದರು. ಈ ವೇಳೆ ವೇಗವಾಗಿ ವ್ಹೀಲಿಂಗ್ ಮಾಡಿಕೊಂಡು ಬಂದ ಯುವಕರು, ಯುವತಿಯರಿದ್ದ ಸ್ಕೂಟರ್‌ಗೆ ಡಿಕ್ಕಿಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಯುವತಿಯರ ಬೈಕ್ ನೆಲಕ್ಕೆ ಅಪ್ಪಳಿಸಿದ್ದು, ಇಬ್ಬರಿಗೂ ಗಂಭೀರ ಗಾಯಗಳಾಗಿವೆ.ಭೂಮಿಕಾ ತಲೆಗೆ ಬಲವಾದ ಪೆಟ್ಟು ಬಿದ್ದ ಹಿನ್ನಲೆ ನಗರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ವೀಲಿಂಗ್ ಮಾಡುತ್ತಿದ್ದ ಶಾಕೀರ್ ಹಾಗು ಅಪ್ರಾಪ್ತ ವಯಸ್ಕನಾಗಿರುವ ರಿಹಾನ್‌ಗೆ ಸಾರ್ವಜನಿಕರು ಸ್ಥಳದಲ್ಲೇ ಹಿಡಿದು, ಬಟ್ಟೆ ಕಳಚಿ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬುಧವಾರ ರಾತ್ರಿ ಸಹ್ಯಾದ್ರಿ ವೃತ್ತದ ಫುಡ್ ಕೋರ್ಟ್ ಸಮೀಪ ಪುಂಡ ಯುವಕರು ವಿಲಿಂಗ್ ಮಾಡಿದ ಪರಿಣಾಮ ಇಬ್ಬರು ವಿದ್ಯಾರ್ಥಿನಿ

ಯರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಇದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ .ಈ ಪ್ರಕರಣ ಸಂಬಂಧಪಟ್ಟಂತೆ ಅಪ್ರಾಪ್ತ ಯುವಕ ಸೇರಿದಂತೆ ಶಕೀರ್‌ಅಹಮದ್ (23) ಎಂಬ ಆರೋಪಿ ಯನ್ನು ಬಂಧಿಸಲಾಗಿದ್ದು 308 ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ ಹಾಗೂ ನ್ಯಾಯಾಲಯಕ್ಕೆಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ

ಹರಿರಾಮ್ ಶಂಕರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಸನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net