ಪೀಠಗಳು ಸಮುದಾಯದ ಏಳಿಗೆಗಾಗಿ ಶ್ರಮಿಸಲಿ

Untitled design (4)
ಹಗರಿಬೊಮ್ಮನಹಳ್ಳಿಯಲ್ಲಿ ಪಂಚಮಸಾಲಿ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪರಮೇಶ ಪಟ್ಟಣ ಶೆಟ್ಟಿ, ಜಿಲ್ಲಾಧ್ಯಕ್ಷ ಪ್ರಕಾಶ್ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ವೈ.ಮಲ್ಲಿಕಾರ್ಜುನ, ಉತ್ತಂಗಿ ರವಿ, ಎಂ.ಜಿ.ರವಿ, ನಟರಾಜ್ ಬಾದಾಮಿ, ಬಂಡಿಹಳ್ಳಿ ಮಂಜುನಾಥ, ನವಿನ್ ಎಲೆಗಾರ್, ಕೆ.ವಾಣಿ ಶಿವಕುಮಾರ್‌ಗೌಡ ಇತರರಿದ್ದರು.
Published on

ಹಗರಿಬೊಮ್ಮನಹಳ್ಳಿ: ರಾಜ್ಯದಲ್ಲಿ ಪಂಚಮಸಾಲಿ ಸಮುದಾಯ ಕೃಷಿಕರಾಗಿಯೇ ಉಳಿದಿದ್ದಾರೆ. ಅವರ ಮಕ್ಕಳು ಸರ್ಕಾರದ ಸೌಲಭ್ಯ ಪಡೆಯಲು ಮೀಸಲಾತಿ ಅಗತ್ಯವಿದೆ ಎಂದು ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ್ ಅಭಿಪ್ರಾಯಪಟ್ಟರು.

ಪಟ್ಟಣದ ಹರ ದೇಗುಲದ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ರಾಜ್ಯಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಏಳನೇ ರಾಜ್ಯಾಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ. ಪ್ರವಾಸ ಕೈಗೊಂಡು ಸಮಾಜ ಸಂಘಟಿಸುವಂತ ಕೆಲಸ ಮಾಡಲಾಗುವುದು. ಪ್ರತಿ ಜಿಲ್ಲೆಯ ಗ್ರಾಮವೊಂದರಲ್ಲಿ ವಾಸ್ತವ್ಯ ಹೂಡಲಾಗುವುದು. ಎರಡು ಪೀಠಗಳನ್ನು ಒಂದು ಮಾಡುವ ಕೆಲಸ ಮಾಡುವುದಿಲ್ಲ. ಆದರೆ, ಯಾವುದೇ ಪೀಠವಾಗಲಿ ಸಮುದಾಯದ ಏಳಿಗೆಗಾಗಿ ದುಡಿಯಬೇಕು. ಪೀಠದ ಅಧೀನದಲ್ಲಿ ಸಮುದಾಯವಿಲ್ಲ, ಸಮುದಾಯದ ಅಡಿಯಲ್ಲಿ ಪೀಠಗಳಿವೆ. ಒಂದು ವೇಳೆ ಪೀಠಗಳು ಒಗ್ಗೂಡಿ ಹೊರಟರೆ ಒಳ್ಳೆಯದು ಎಂದರು.

ಹರಿಹರ ಪೀಠದಲ್ಲಿ ಅ.6ರಂದು ಸಮುದಾಯದ 10 ಸಾವಿರಕ್ಕೂ ಅಧಿಕ ಜನರ ಮುಂದೆ ಅಧಿಕಾರ ಸ್ವೀಕಾರ ಮಾಡಲಾಗುವುದು. ಇದೇ 23ರಂದು ಕಿತ್ತೂರು ರಾಣಿ ಚನ್ನಮ್ಮ ವಿಜಯೋತ್ಸವಕ್ಕೆ 200 ವರ್ಷ ತುಂಬುವ ನೆಪದಲ್ಲಿ ರಾಜ್ಯಾದ್ಯಂತ ರಥಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿಚಿಡಿ ಕೊಟ್ರೇಶ್ ಮಾತನಾಡಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಪರಮೇಶ ಪಟ್ಟಣ ಶೆಟ್ಟಿ, ಜಿಲ್ಲಾಧ್ಯಕ್ಷ ಪ್ರಕಾಶ್ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಬಸವರಾಜ್ ಸೊನ್ನದ್, ತಾಲೂಕು ಪ್ರಧಾನ ಕಾರ್ಯದರ್ಶಿ ಬಾವಿ ರವೀಂದ್ರ, ನೌಕರರ ಸಂಘದ ತಾಲೂಕು ಅಧ್ಯಕ್ಷ ಹುಳಿಮಜ್ಗಿ ಸುರೇಶ್, ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ವೀರಣ್ಣ ಮೆಣಸಿಗಿ, ನಗರ ಘಟಕದ ಅಧ್ಯಕ್ಷೆ ಮಂಜುಳಾ, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಕೊಟ್ರೇಶ್ ಶೆಟ್ಟರ್, ವೈ.ಮಲ್ಲಿಕಾರ್ಜುನ, ಪ್ರಮುಖರಾದ ಉತ್ತಂಗಿ ರವಿ, ಎಂ.ಜಿ.ರವಿ, ನಟರಾಜ್ ಬಾದಾಮಿ, ಬಂಡಿಹಳ್ಳಿ ಮಂಜುನಾಥ, ನವಿನ್ ಎಲೆಗಾರ್, ಕೆ.ವೀರೇಶ್, ಕೆ.ವಾಣಿ ಶಿವಕುಮಾರ್‌ಗೌಡ, ಅಂಗಡಿ ಸಂತೋಷ್, ಗುರುಬಸವರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net