ಮಂಗಳೂರು: ಇಲ್ಲಿನ ಪಿಲಿಕುಳ ಡಾ.ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ನಾಯಿಗಳ ದಾಳಿಗೆ 15 ಜಿಂಕೆಗಳು ಮೃತಪಟ್ಟಿವೆ.
ಗುರುವಾರ ರಾತ್ರಿ ನಾಯಿಗಳ ಹಿಂಡು ಪ್ರಾಣಿ ಸಂಗ್ರಹಾಲಯದೊಳಗೆ ಪ್ರವೇಶಿಸಿ ಜಿಂಕೆಗಳ ಮೇಲೆ ದಾಳಿ ಮಾಡಿವೆ. ಪಿಲಿಕುಳ ನಿಸರ್ಗಧಾಮದ ಆಡಳಿತದ ನಿರ್ಲಕ್ಷ್ಯ ವೇ ಇದಕ್ಕೆ ಕಾರಣ. ಜಿಲ್ಲಾಡಳಿತ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.