ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಸಾಧಕಿಗೆ ಸನ್ಮಾನ

19 KRN-2
Published on

ಕೆ.ಆರ್.ನಗರ: ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ದ್ವಿತೀಯ ಪಿಯುಸಿಯಲ್ಲಿ ತಾಲೂಕಿನ ಸರ್ಕಾರಿ ಕಾಲೇಜುಗಳಲ್ಲೇ ಪ್ರಥಮ ಸ್ಥಾನ ಪಡೆದ ನಿತ್ಯಶ್ರೀ ಕೆ.ಕೃಷ್ಣ 549(ಶೇ.92) ಅವರನ್ನು ತಂಬಾಕು ಮಂಡಳಿಯ ನಿವೃತ್ತ ಅಧಿಕಾರಿ ಕೆ.ಎನ್.ದಿನೇಶ್ ಮತ್ತು ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್.ರಮೇಶ್ ಸನ್ಮಾನಿಸಿದರು.

ನಿತ್ಯಶ್ರೀ ಕೆ.ಕೃಷ್ಣ ಪಟ್ಟಣದ ನಿವಾಸಿ ಚೀರನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೆ.ಎಸ್.ಕೃಷ್ಣ ಮತ್ತು ಬಿಜಿಎಸ್ ಶಾಲೆಯ ಹಿಂದಿ ಶಿಕ್ಷಕಿ ಸಿ.ಆಲಮೇಲು ದಂಪತಿ ಪುತ್ರಿಯಾಗಿದ್ದು, ಈಕೆ ಕನ್ನಡ-98, ಗಣಿತ-95, ಭೌತಶಾಸ್ತ್ರ-91, ಜೀವಶಾಸ್ತ್ರ-91, ಇಂಗ್ಲಿಷ್-89, ರಸಾಯನಶಾಸ್ತ್ರ-85 ಅಂಕ ಪಡೆದಿದ್ದು, ಶೇ.92ರಷ್ಟು ಫಲಿತಾಂಶ ಗಳಿಸಿದ್ದಾಳೆ. ನಂಜನಗೂಡು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ದೀಪು, ಶಿಕ್ಷಕರಾದ ಪುರುಷೋತ್ತಮ್, ಸತೀಶ್, ಮುಖಂಡರಾದ ಕೃಷ್ಣಶೆಟ್ಟಿ, ಸೋಮಶೇಖರ್, ಕೆ.ಎಸ್.ಕೃಷ್ಣ, ಸಿ.ಆಲಮೇಲು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net