

ಚಿತ್ರದುರ್ಗ: ತಾಲೂಕಿನ ಬೆಳಗಟ್ಟ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದೆ. ಕಲಾ ವಿಭಾಗದಲ್ಲಿ ವಿದ್ಯಾರ್ಥಿ ಪಿ.ಮಹೇಂದ್ರ ಶೇ. 91ರಷ್ಟು ಅಂಕಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಅತ್ಯುತ್ತಮ ಶ್ರೇಣಿಯಲ್ಲಿ ಮೂವರು, ಪ್ರಥಮ ಶ್ರೇಣಿಯಲ್ಲಿ ನಾಲ್ವರು ಉತ್ತೀರ್ಣರಾಗಿದ್ದಾರೆ. ಪ್ರಸ್ತುತ 2024-2025ನೇ ಸಾಲಿನ ಪ್ರಥಮ/ದ್ವಿತೀಯ ಪಿಯುಸಿಗೆ ಉಚಿತ ಪ್ರವೇಶಾತಿ ಪ್ರಾರಂಭವಾಗಿದೆ ಎಂದು ಪ್ರಾಚಾರ್ಯ ವಿ.ಲೋಕೇಶ್ ತಿಳಿಸಿದ್ದಾರೆ.