ಪಿಯುಸಿ ರಿಪೀಟರ್ ವಿದ್ಯಾರ್ಥಿಗಳಿಗೆ ಅನ್ಯಾಯ

31 ckm 6 web
Published on

ಚಿಕ್ಕಮಗಳೂರು: ಈ ಬಾರಿಯ ಸಿಇಟಿ ಫಲಿತಾಂಶದಲ್ಲಿ ಪುನರಾವರ್ತಿತ ವಿದ್ಯಾರ್ಥಿಗಳ ಪಿಯುಸಿ ಅಂಕಗಳನ್ನು ಪರಿಗಣಿಸದೇ ಇರುವುದರಿಂದ ನೂರಾರು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ಪ್ರಕಟಗೊಂಡಿರುವ ಸಿಇಟಿ ಫಲಿತಾಂಶದಲ್ಲಿ ಲೋಪವಾಗಿದ್ದು ಪಿಯುಸಿ ರಿಪೀಟರ್ಸ್​ಗಳಿಗೆ ರ್ಯಾಂಕಿಂಗ್​ನಲ್ಲಿ ಅನ್ಯಾಯವಾಗಿದೆ ಎಂದು ವಿದ್ಯಾರ್ಥಿಗಳು ಹಾಗೂ ಪಾಲಕರು ದೂರಿದರು. ಪಿಯು ರಿಪೀಟರ್​ಗಳ ಅಂಕಿಗಳನ್ನು ಪರಿಗಣಿಸದೆ ಕೇವಲ ಸಿಇಟಿ ಅಂಕಗಳನ್ನಷ್ಟೇ ಪರಿಗಣಿಸಿ ರ‍್ಯಾಂಕಿಂಗ್ ನೀಡಲಾಗಿದೆ. ಇದರಿಂದ ಲಕ್ಷಾಂತರ ರ್ಯಾಂಕ್​ಗಳಲ್ಲಿ ವ್ಯತ್ಯಾಸವಾಗಿದ್ದು ಉತ್ತಮವಾಗಿ ಪರೀಕ್ಷೆ ಬರೆದವರಿಗೂ ಅನ್ಯಾಯವಾಗಿದೆ. ಈ ವರ್ಷದ ಫಲಿತಾಂಶದಲ್ಲಿ ಕೇವಲ ಈ ವರ್ಷದ ಪಿಯು ಅಂಕಗಳನ್ನಷ್ಟೇ ಪರಿಗಣಿಸಲಾಗಿದೆ. ಸರ್ಕಾರ ಈ ಬಗ್ಗೆ ಕೂಡಲೇ ಗಮನಹರಿಸಿ ಲೋಪವನ್ನು ಸರಿಪಡಿಸುವ ಮೂಲಕ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net