ಪಿಯುಸಿ ಫೇಲ್ ಮಾಡಬೇಡಿ

2604Klb09
ಕಲಬುರಗಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸರ್ಕಾರಿ ನೌಕರರ ದಿನ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಸದ ಡಾ.ಉಮೇಶ ಜಾಧವ್, ಕೆಕೆಆರ್​ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ, ಡಿಸಿ ಯಶವಂತ ಗುರುಕರ್, ಡಾ.ದಿಲೀಷ ಶಶಿ, ಭೀಮಾಶಂಕರ ತೆಗ್ಗೆಳ್ಳಿ, ರಾಜು ಲೇಂಗಟಿ ಇತರರಿದ್ದರು.
Published on

ಕಲಬುರಗಿ: ಸರ್ಕಾರದ ಪ್ರತಿಯೊಂದು ಕಡತದಲ್ಲಿ ಜೀವವಿದೆ. ಅದನ್ನು ಅಧಿಕಾರಿಗಳು ಸಾಯಲು ಬಿಡಬಾರದು. ಪೇಪರ್ ಅಂಡರ್ ಕನ್ಸಿಡರೇಷನ್ (ಪಿಯುಸಿ) ಮೂಲಕ ಜೀವ ತುಂಬಿ ಕಾರ್ಯರೂಪಕ್ಕೆ ತರಬೇಕು. ಅಧಿಕಾರಿಗಳು ಮನಸ್ಸು ಮಾಡಿದರೆ ಎಂಪಿ, ಎಂಎಲ್ಎಗಳಿಗೆ ಕೆಲಸವೇ ಇರಲ್ಲ ಎಂದು ಸಂಸದ ಡಾ.ಉಮೇಶ ಜಾಧವ್ ಹೇಳಿದರು.

ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಡಿ ಮಂಗಳವಾರ ಆಯೋಜಿಸಿದ್ದ ಸರ್ಕಾರಿ ನೌಕರರ ದಿನ ಹಾಗೂ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಪ್ರಥಮ ಸಭೆಯಲ್ಲಿ ಹೇಳಿದ್ದೇ `ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆಯಿರಿ. ಅನೌಪಚಾರಿಕವಾಗಿ ಮನೆಗೆ ಕರೆಸಿ ಕುಶಲೋಪರಿ ನಡೆಸಿ ಸಲಹೆ ಪಡೆದು ಕೆಲಸ ಮಾಡಬೇಕು' ಎಂದು ಸ್ಮರಿಸಿದರು.

ಪ್ರಧಾನಿ ಮೋದಿ ಯಶಸ್ವಿ ಆಡಳಿತಕ್ಕೆ ಕಾರಣ ಅವರೊಂದಿಗೆ ಇರುವ ಅಧಿಕಾರಿ ವರ್ಗ. ನೌಕರರಿಗೆ ಸರ್ಕಾರ ಎಲ್ಲ ಸೌಲಭ್ಯ ನೀಡುತ್ತಿದೆ. ಅದಕ್ಕೆ ತಕ್ಕಂತೆ ಕೆಲಸವಾಗಬೇಕು. ಅಧಿಕಾರಿಗಳ ಮೇಲೆ ಯಾರೂ ಸವಾರಿ ಮಾಡಬಾರದು. ಹಾಗೊಮ್ಮೆ ಸವಾರಿ ಮಾಡಲು ಮುಂದಾದರೆ ಗಮನಕ್ಕೆ ತನ್ನಿ. ನಾನು ಸದಾ ನೌಕರರ ಜತೆಗಿರುವೆ ಎಂದು ಅಭಯ ನೀಡಿದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಮಹತ್ತರ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಪ್ರಧಾನಿ ಮೋದಿ ಅವರು ಪೌರ ಕಾರ್ಮಿಕರ ಪಾದಪೂಜೆ ಮಾಡಿದ್ದು ನೌಕರರ ಕಾರ್ಯಕ್ಕೆ ಸಂದ ಗೌರವ ಎಂದರು.

ಜಿಲ್ಲಾಧಿಕಾರಿ ಯಶವಂತ ಗುರುಕರ್ ಮಾತನಾಡಿ, ಸರ್ಕಾರಿ ನೌಕರರು ಅಮೇಜಾನ್, ಫ್ಲಿಫ್ ಕಾರ್ಟನಂಥ ಮಲ್ಟಿ ನ್ಯಾಷನಲ್ ಕಂಪನಿಗಳಲ್ಲಿ ಕೆಲಸ ಮಾಡುವವರಿಂತ ಹೆಚ್ಚಿನ ಕಾರ್ಯಕ್ಷಮತೆ ಹೊಂದಿದವರು. ಆಶಾ ಕಾರ್ಯಕರ್ತೆಯರು 10 ಸಾವಿರ ವೇತನ ಪಡೆದು ಅತಿ ಹೆಚ್ಚಿನ ಅದ್ಭುತ ಕಾರ್ಯ ಮಾಡುತ್ತಾರೆ ಎಂದು ಕೊಂಡಾಡಿದರು.

ಜಿಪಂ ಸಿಇಒ ಡಾ.ದಿಲೀಷ ಶಶಿ ಮಾತನಾಡಿ, ಕಚೇರಿಯಲ್ಲಿರುವ ಎಲ್ಲರೂ ಒಂದು ಕುಟುಂಬವಿದ್ದಂತೆ. ನೌಕರರು ತಮ್ಮ ಮೇಲೆ ಒತ್ತಡ ಬರದಂತೆ ಕಡತ ಪೂರ್ಣಗೊಳಿಸಬೇಕು. ಪ್ರಸ್ತುತ ಅತ್ಯುತ್ತಮ ಕಾರ್ಯ ನಿರ್ವಹಣೆಯಲ್ಲಿ ಕಲಬುರಗಿ ಐದನೇ ಸ್ಥಾನದಲ್ಲಿದ್ದು, ಅದಕ್ಕೆ ಎಲ್ಲ ನೌಕರರ ಸಹಕಾರವೇ ಕಾರಣ ಎಂದರು.

ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್. ರವಿಕುಮಾರ ಮಾತನಾಡಿ, ಸರ್ಕಾರಿ ಅಧಿಕಾರಿಗಳು ಸಂತೋಷವಾಗಿದ್ದರೆ ಉತ್ತಮ ಸೇವೆ ನೀಡಲು ಸಾಧ್ಯ. ಆದ್ದರಿಂದ ಅವರ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಬೇಕು. ತಳಮಟ್ಟದ ಬಿ, ಡಿ, ಗ್ರೂಪ್ ನೌಕರರಿಂದ ಮಾತ್ರ ಬದಲಾವಣೆ ಸಾಧ್ಯ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು ಲೇಂಗಟಿ ಪ್ರಾಸ್ತಾವಿಕ ಮಾತನಾಡಿದರು. ಅಪರ ಡಿಸಿ ಭೀಮಾಶಂಕರ ತೆಗ್ಗೆಳ್ಳಿ, ಜಿಲ್ಲಾ ಶಸ್ತ್ರಜ್ಞ ಡಾ.ಎ.ಎಂ. ರುದ್ರವಾಡಿ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ, ಅಬ್ದುಲ್ ಅಜೀಮ್, ಸತೀಶ ಸಜ್ಜನ, ಹಣಮಂತರಾಯ ಗೋಳಸಾರ, ಬಾಬು ಮೌರ್ಯ, ಚಂದ್ರಕಾಂತ ಏರಿ, ಉಮಾದೇವಿ ಇತರರಿದ್ದರು. ಸಿದ್ದಲಿಂಗಯ್ಯ ಮಠಪತಿ ಸ್ವಾಗತಿಸಿದರು.

ನನಗೆ ಕರೊನಾ ಬಂದಾಗ ಕೈದಿಯಂತೆ ಕೊಂಡೊಯ್ದರು. ನನ್ನ ಮಗ, ಪತ್ನಿ, ಸಹಾಯಕರು, ಡ್ರೈವರ್ ಸೇರಿ 11 ಜನ ಆಸ್ಪತ್ರೆಯಲ್ಲಿದ್ದೆವು. ಆಗ ಸಹಾಯಕ್ಕೆ ಬಂದವರು ಆಯಾ, ಸ್ಟಾಫ್ ನಸರ್್ಗಳೇ ಹೊರತು ದೊಡ್ಡ ದೊಡ್ಡ ಹುದ್ದೆಯಲ್ಲಿ ಇರುವವರಲ್ಲ. ತಳಮಟ್ಟದ ನೌಕರರ ಕಾರ್ಯ ಶ್ಲಾಘನೀಯ.
| ಡಾ.ಉಮೇಶ ಜಾಧವ್ ಸಂಸದ

ಸರ್ಕಾರಿ ನೌಕರರು ಕರೊನಾ ವೇಳೆ ಜೀವದ ಹಂಗು ತೊರೆದು ಕಾರ್ಯ ಮಾಡಿದ್ದಾರೆ. ಸೈನಿಕರಂತೆ ಜನರ ಮಧ್ಯೆ ಇದ್ದು ವೈದ್ಯರು, ನಸರ್್, ಪೌರಕಾರ್ಮಿಕರು ಸೇವೆ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಟೀಮ್ ಇಂಡಿಯಾ ಆಗಿ ಕಾರ್ಯನಿರ್ವಹಿಸಬೇಕು ಎಂದಿದ್ದರು. ಅದರಂತೆ ಟೀಮ್ ಕಲಬುರಗಿ ಆಗಿ ಸೇವೆ ಸಲ್ಲಿಸೋಣ. ನೌಕರರ ಭವನ ನಿರ್ಮಾಣಕ್ಕೆ ಎಲ್ಲ ಸಹಕಾರ ನೀಡಲಾಗುವುದು.
| ದತ್ತಾತ್ರೇಯ ಪಾಟೀಲ್ ರೇವೂರ ಕೆಕೆಆರ್​ಡಿಬಿ ಅಧ್ಯಕ್ಷ, ಶಾಸಕ

ಜಿಲ್ಲಾಧಿಕಾರಿಗೆ ಬಾಕ್ಲ್ಯಮೇಲ್​ ​?: ಸಕರ್ಾರಿ ನೌಕರರು ಜಾತಿ, ಧರ್ಮ ನೋಡಿ ಕೆಲಸ ಮಾಡಬಾರದು. ನನಗೆ ಸ್ಮಶಾನಭೂಮಿ ಒಂದರ ಕಾರಣಕ್ಕೆ ಬಾಕ್ಲ್ಯಮೇಲ್​ ಮಾಡಲಾಗಿತ್ತು. ಆದರೆ ಅವರಿಗೆ ತಕ್ಕ ಪಾಠ ಕಲಿಸಿ ಕಾನೂನು ಪ್ರಕಾರ ಕಾರ್ಯನಿರ್ವಹಿಸಿದೆ. ಕೆವೈಸಿ ಆಗಿಲ್ಲ ಎಂದು ತಿಂಗಳುಗಟ್ಟಲೇ ಬಡವರಿಗೆ ಪಡಿತರ ನೀಡಿರಲಿಲ್ಲ. ಅದನ್ನು ಬಗೆಹರಿಸಿದ ಸಂತೃಪ್ತಿ ಇದೆ. ಯಾವುದೇ ಕೆಲಸ ಬಂದರೂ ಸರಿಯಾಗಿ ಸ್ಪಂದಿಸಬೇಕು. ಪ್ರೀತಿಯಿಂದ ಜನರ ಮನಸ್ಸು ಗೆಲ್ಲಬೇಕು ಎಂದು ಜಿಲ್ಲಾಧಿಕಾರಿ ಯಶವಂತ ಗುರುಕರ್ ತಮ್ಮ ಅನುಭವ ಹಂಚಿಕೊಂಡರು.

ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತರು: ಅಲ್ಲಾಭಕ್ಷ (ಸಮಾಜ ಕಲ್ಯಾಣ ಇಲಾಖೆ), ರಮೇಶ ಸಂಗಾ (ಹಿಂದುಳಿದ ವರ್ಗಗಳ ಕಲ್ಯಾಣ), ನವೀನಕುಮಾರ ಯು. (ಮಹಿಳಾ ಮತ್ತು ಮಕ್ಕಳ ಕಲ್ಯಾಣ), ಅಶೋಕ ವಿ. (ಜಿಲ್ಲಾ ಖಜಾನೆ), ಚಂದ್ರಕಾಂತ ಜೀವಣಗಿ(ಕೃಷಿ), ಅಂಜುಂ ತಬಸ್ಸುಮ್ (ತಹಸೀಲ್ದಾರ್), ನಾಗಮ್ಮ ಕಟ್ಟಿಮನಿ (ತಹಸೀಲ್ದಾರ್), ಬಸವರಾಜ ಬೆಣ್ಣೆಶಿರೂರ (ತಹಸೀಲ್ದಾರ್), ಮಹಾಂತಪ್ಪ ಮುಡಬಿ (ಚುನಾವಣೆ ತಹಸೀಲ್ದಾರ್), ನಾಗನಾಥ (ತಹಸೀಲ್ದಾರ್), ರಾಘವೇಂದ್ರ ವಿಭೂತಿ (ಆರ್ಸಿ ಕಚೇರಿ ಶಿರಸ್ತೇದಾರ), ಖಾಜಾ ಬಂದೇನವಾಜ್ (ಭೂ ದಾಖಲೆ), ಸೂರ್ಯಕಾಂತ ಹಿಪ್ಪರಗಿ (ಅಕ್ಷರ ದಾಸೋಹ), ಅಂಬುಜಾ ಮಲ್ಲಿಕಾಜರ್ುನ (ಆರೋಗ್ಯ ಸುರಕ್ಷಾಧಿಕಾರಿ), ರವಿ ಎ. (ವಾತರ್ಾ ಇಲಾಖೆ), ಅನುಪಮಾ (ಪಿಡಿಒ), ಲಕ್ಷ್ಮೀ ಕೋರೆ (ವಾರ್ಡನ್), ಪುಷ್ಪಾ (ಲ್ಯಾಬ್ ಟೆಕ್ನಿಷಿಯನ್), ನಾಗಭೂಷಣ (ಜಿಪಂ ಕಚೇರಿ), ಜಗನ್ನಾಥ (ಡಿಸಿ ಕಚೇರಿ ಸಿಪಾಯಿ) ಅವರಿಗೆ ವರ್ಷಕ್ಕೆ 10 ಜನರಂತೆ ಎರಡು ವರ್ಷದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net