ಪಿಯು ವಿದ್ಯಾಥಿರ್ಗಳಿಗೆ ಉಚಿತ ಬಸ್ ಪ್ರಯಾಣ

Published on

ಹುಬ್ಬಳ್ಳಿ : ಮಾರ್ಚ್ 9 ರಿಂದ 29ರವರೆಗೆ ನಡೆಯಲಿರುವ ದ್ವೀತಿಯ ಪಿಯುಸಿ ಪರೀೆಗಳಿಗೆ ಹಾಜರಾಗುವ ವಿದ್ಯಾಥಿರ್ಗಳ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.
ದ್ವೀತಿಯ ಪಿಯುಸಿ ಪರೀೆಗೆ ಹಾಜರಾಗುವ ವಿದ್ಯಾಥಿರ್ಗಳಿಗೆ ಅವರ ವಿದ್ಯಾಸಂಸ್ಥೆಯ ಹೊರತಾಗಿ ಬೇರೆ ವಿದ್ಯಾಸಂಸ್ಥೆ ಗಳಿಗೆ ಪರೀಾ ಕೇಂದ್ರಗಳ ನಿಯೋಜನೆಯಾಗಿರುವುದರಿಂದ ಶಿಣ ಇಲಾಖೆಯ ಕೋರಿಕೆಯ ಮೇರೆಗೆ ಈ ವ್ಯವಸ್ಥೆ ಮಾಡಲಾಗಿದೆ.
ಪರೀೆಗೆ ಹಾಜರಾಗುವ ವಿದ್ಯಾಥಿರ್ಗಳು ನಿರ್ವಾಹಕರಿಗೆ ದ್ವೀತಿಯ ಪಿಯುಸಿ ಪರೀೆಯ ಪ್ರವೇಶ ಪತ್ರ ತೋರಿಸಿ, ತಮ್ಮ ವಾಸಸ್ಥಳದಿಂದ ನಿಯೋಜಿತ ಪರೀಾ ಕೇಂದ್ರಗಳಿಗೆ ಹೋಗಲು ಹಾಗೂ ಪರೀೆ ಮುಗಿಸಿ ವಾಸ ಸ್ಥಳಕ್ಕೆ ಹಿಂದುರಗಲು ಸಂಸ್ಥೆಯ ನಗರ, ಉಪನಗರ, ಸಾಮಾನ್ಯ ಹಾಗೂ ವೇಗದೂತ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net