

ಚಿತ್ರದುರ್ಗ: ಗ್ರಾಮಗಳ ಸ್ವಚ್ಛತೆ ಮತ್ತು ನೈರ್ಮಲ್ಯೀಕರಣದ ಹೆಸರಿನಲ್ಲಿ ಜಿಲ್ಲೆಯ ಆರು ತಾಲೂಕುಗಳ ಗ್ರಾಪಂಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ ಬಿಂಬಿಸುವ ನಾಮಫಲಕಗಳುಳ್ಳ ಗೋಡೆಬರಹಗಳಲ್ಲಿ ಮಹಾತ್ಮಗಾಂಧಿ, ರಾಷ್ಟ್ರಲಾಂಛನ, ದೇಶದ ಭಾವುಟವನ್ನು ವ್ಯಂಗ್ಯವಾಗಿ ಚಿತ್ರಿಸಿ ಅವಮಾನಿಸಿರುವ ಸಂಬಂಧ ಗ್ರಾಪಂಗಳ ಪಿಡಿಒ, ತಾಪಂ ಇಒಗಳ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸುವಂತೆ ಕರುನಾಡ ವಿಜಯಸೇನೆ ಕಾರ್ಯಕರ್ತರು ಚಿತ್ರದುರ್ಗದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ವಿಜಯಸೇನೆ ಜಿಲ್ಲಾ ಅಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾ ಅಧ್ಯಕ್ಷೆ ವೀಣಾ ಗೌರಣ್ಣ, ಪದಾಧಿಕಾರಿಗಳಾದ ಜಗದೀಶ್, ಮಹಮದ್ ರಫಿ, ನಾಗರತ್ನಮ್ಮ, ನಾಗರಾಜ್ ಮುತ್ತು, ಅವಿನಾಶ್, ಆರ್.ಪ್ರದೀಪ್, ವಿಶ್ವನಾರಾಯಣ ಮೂರ್ತಿ ಇತರರಿದ್ದರು.