ಪಿಡಿಒ ಅಮಾನತು ಆದೇಶ ರದ್ದು

Nela Ph 01 T begur GP (1)
beguru gp
Published on

ವಿಜಯವಾಣಿ ಸುದ್ದಿಜಾಲ ನೆಲಮಂಗಲ

ಟಿ.ಬೇಗೂರು ಗ್ರಾಪಂ ಪಿಡಿಒ ಶೋಭಾರಾಣಿ ವಿರುದ್ಧ ಹೊರಡಿಸಿದ್ದ ಅಮಾನತು ಆದೇಶ ರದ್ದಾಗಿದ್ದು, ಕರ್ತವ್ಯಕ್ಕೆ ಹಾಜರಾಗುವಂತೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ (ಕೆ.ಇ.ಟಿ) ಆದೇಶಿದೆ.

ಮೇ 15ರಂದು ಪಂಚಾಯಿತಿ ಹಣ ದುರುಪಯೋಗ ಆರೋಪದಡಿ ಶೋಭಾರಾಣಿ ಅವರನ್ನು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎನ್.ಅನುರಾಧಾ ಅಮಾನತು ಮಾಡಿದ್ದರು. ಇದರ ವಿರುದ್ಧ ಪಿಡಿಒ ಕೆಇಟಿಗೆ ಮೊರೆಹೋಗಿದ್ದರು. ಬಳಿಕ ಪಿಡಿಓ ಶೋಭಾರಾಣಿ ಅವರು ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ (ಕೆ.ಇ.ಟಿ) ಮೊರೆ ಹೋಗಿದ್ದು ಜೂ.16ರಂದು ಅಮಾನತು ರದ್ದುಗೊಳಿಸಿ ಕೆಲಸ ನಿರ್ವಹಿಸುವಂತೆ ಅದೇಶ ಮಾಡಿತ್ತು. ಅದರಂತೆ ಪಿಡಿಒ ಕರ್ತವ್ಯ ನಿರ್ವಹಿಸುತ್ತಿದ್ದರು. ಬಳಿಕ ಜು.29ರಂದು ಅದೇ ಹಣದ ದುರುಪಯೋಗ ವಿಚಾರಕ್ಕೆ ಮತ್ತೊಮ್ಮೆ ಅಮಾನತು ಮಾಡಿ ಅದೇಶ ಹೊರಡಿಸಿದ್ದರು. ನಂತರ ಶೋಭಾರಾಣಿ ಕೆಇಟಿಗೆ ಮೊರೆ ಹೋಗಿದ್ದರು. ನ್ಯಾಯಾಲಯದ ವಿಚಾರಣೆಯಲ್ಲಿ ಪಿಡಿಒ ಮೇಲಿನ ಆರೋಪ ನಿರಾಧಾರ ಎಂದು ಪರಿಗಣಿಸಿ ಅ.4ರಂದು ಅಮಾನತು ಆದೇಶ ರದ್ದುಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net