ಪಿಡಿಒ ಅಮಾನತಿಗೆ ಒತ್ತಾಯಿಸಿ ಧರಣಿ

h10-Revadihal
Published on

ಹುಬ್ಬಳ್ಳಿ: ರೇವಡಿಹಾಳ ಗ್ರಾಮದಲ್ಲಿ ಬಡವರಿಗೆ ಸೇರಬೇಕಿದ್ದ ನಿವೇಶನಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಸಹಕರಿಸಿದ್ದ ಪಿಡಿಒ ನಾಗರಾಜ ದೊಡ್ಡಮನಿ ಅವರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಇಲ್ಲಿನ ಮಿನಿ ವಿಧಾನಸೌಧದ ಎದುರು ನೂರಾರು ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು.

11.12 ಎಕರೆ ಜಮೀನಿನಲ್ಲಿ ಒಟ್ಟು 310 ನಿವೇಶನಗಳಲ್ಲಿ ಕಟ್ಟಡ ನಿರ್ವಿುಸಲು ಅನರ್ಹರಿಗೆ ಪಿಡಿಒ ನಾಗರಾಜ ದೊಡ್ಡಮನಿ ಕಾನೂನು ಬಾಹಿರವಾಗಿ ಅನುಮತಿ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಗ್ರಾಮದ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸರ್ಕಾರಕ್ಕೆ ಮಾಹಿತಿ ನೀಡಿಲ್ಲ. ಸಾರ್ವಜನಿಕ ರಸ್ತೆ ಅತಿಕ್ರಮಿಸಿ ನಿಯಮಬಾಹಿರವಾಗಿ ಮನೆ ಕಟ್ಟಲು ಅನುಮತಿ ನೀಡಿದ್ದಾರೆ ಎಂದು ದೂರಿದರು.

ಗ್ರಾಮದ ಈರಪ್ಪ ಮಾದರ, ಗುರುಪಾದಯ್ಯ ಮುಪ್ಪಯ್ಯನವರ, ಚನ್ನಬಸಪ್ಪ ಭಜಂತ್ರಿ, ಸಿದ್ದಪ್ಪ ಹರಿಜನ, ನಿಂಗವ್ವ ಹರಿಜನ, ಫಕೀರವ್ವ ಹರಿಜನ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net