ಪಿಡಿಒ ಅಮಾನತಿಗೆ ಆಗ್ರಹಿಸಿ ಮನವಿ

Manavi
Published on

ಚಿತ್ರದುರ್ಗ: ಕರ್ತವ್ಯದಲ್ಲಿ ನಿರ್ಲಕ್ಷೆ ತೋರುತ್ತಿರುವ ಜಿಲ್ಲೆಯ ಮಲ್ಲಪ್ಪನಹಳ್ಳಿ ಗ್ರಾಪಂ ಪಿಡಿಒ ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸುವಂತೆ ಬಂಜಾರ ಲಂಬಾಣಿ ಸಮಾಜದ ಪದಾಧಿಕಾರಿಗಳು ಜಿಪಂ ಉಪ ಕಾರ್ಯದರ್ಶಿ ತಿಮ್ಮಪ್ಪ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಅಲ್ಲಿನ ಗ್ರಾಪಂ ಅಧ್ಯಕ್ಷರಿಗೆ ಅಗೌರವ ತೋರುತ್ತಿರುವ ಪಿಡಿಒ ತಮ್ಮ ವ್ಯಾಪ್ತಿ ಮೀರಿ, ಮತ್ತೊಂದು ಗುಂಪನ್ನು ಎತ್ತಿಕಟ್ಟಿ ಮಾನಸಿಕವಾಗಿ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಅಶಿಸ್ತಿನಿಂದ ನಡೆದುಕೊಳ್ಳುತ್ತಿದ್ದು, ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಬಂಜಾರ ಲಂಬಾಣಿ ಸಮಾಜದ ಅಧ್ಯಕ್ಷ ಎಂ.ಸತೀಶ್‌ಕುಮಾರ್, ಪದಾಧಿಕಾರಿಗಳಾದ ಪರಮೇಶ್‌ನಾಯ್ಕ, ತಣಿಗೆಹಳ್ಳಿ ಪ್ರವೀಣ್‌ನಾಯ್ಕ, ಗ್ರಾಪಂ ಸದಸ್ಯರಾದ ವೀರಭದ್ರನಾಯ್ಕ, ರಮೇಶ್‌ನಾಯ್ಕ, ಮಾಜಿ ಸದಸ್ಯ ಉಮಾಪತಿ, ಸಮುದಾಯದ ತಿಪ್ಪೇಶ್‌ನಾಯ್ಕ, ಪ್ರಶಾಂತ್‌ನಾಯ್ಕ, ನಾಗರಾಜ್‌ನಾಯ್ಕ, ನಟರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net