ಪಿಡಿಎ ಸಾಂಸ್ಕೃತಿಕ ಉತ್ಸವ ನಿರ್ಮಾಣ 26, 27ರಂದು

2305KLB06
Published on

ಕಲಬುರಗಿ: ನಗರದ ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯ (ಪಿಡಿಎ ಕಾಲೇಜ್​)ದಲ್ಲಿ ನರ‍್ಮಾಣ&೨೦೨೫ ವರ‍್ಷಿಕ ತಾಂತ್ರಿಕ ಉತ್ಸವ ಮೇ ೨೬, ೨೭ರಂದು ಹಮ್ಮಿಕೊಂಡಿದ್ದು, ಇಂಜಿನಿಯರ್​ ವಿದ್ಯರ‍್ಥಿಗಳ ತಂತ್ರಜ್ಞಾನ, ಸಂಶೋಧನೆ, ವಿಜ್ಞಾನ ಮಾದರಿಗಳ ಜ್ಞಾನ ಪ್ರರ‍್ಶನ ವೇದಿಕೆ ದೊರೆಯಲಿದೆ ಎಂದು ಹೈದರಾಬಾದ್​ ರ‍್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ, ಎಂಎಲ್​ಸಿ ಶಶೀಲ ನಮೋಶಿ ತಿಳಿಸಿದರು.

೧೨ ರ‍್ಷದಿಂದ ಕಾಲೇಜಿನಲ್ಲಿ ವಿದ್ಯರ‍್ಥಿಗಳ ತಾಂತ್ರಿಕ ಕ್ರಿಯಾಶೀಲತೆ, ತಾಂತ್ರಿಕ ಜ್ಞಾನ, ಸಂಶೋಧನೆ, ಆವಿಷ್ಕಾರಗಳ ಪ್ರರ‍್ಶನಕ್ಕೆ ವೇದಿಕೆ ಕಲ್ಪಿಸುತ್ತಿದ್ದು, ಪ್ರಸಕ್ತ ರ‍್ಷ ಕೌಶಲ ಪ್ರರ‍್ಶನ, ಸಾಂಸತಿಕ, ತಾಂತ್ರಿಕ ಕರ‍್ಯಕ್ರಮ ನಡೆಯಲಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉತ್ಸವದ ಭಾಗವಾಗಿ ಮೇ ೨೬ ರಂದು ಬೆಳಗ್ಗೆ ೬.೩೦ಕ್ಕೆ ಆಪರೇಷನ್​ ಸಿಂಧೂರ ನಮ್ಮ ಯೋಧರಿಗೆ ಸರ‍್ಪಿತ ಓಟ ನಡೆಯಲಿದೆ. ಬೆಳಗ್ಗೆ ೧೦ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕಾಲೇಜಿನ ಹಳೇ ವಿದ್ಯರ‍್ಥಿ, ಕ್ರಿಶೈ ಟೆಕ್ನಾಲಜಿಸ್​ ಸಿಇಒ ಕೃಶ ನಾಯಕ್​, ಎಸ್​ಪಿ ಅಡ್ಡೂರು ಶ್ರೀನಿವಾಸುಲು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ಎಚ್​ಕೆಇ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಉದಯಕುಮಾರ ಚಿಂಚೋಳಿ, ಡಾ.ಕೈಲಾಶ ಪಾಟೀಲ್​ ಸೇರಿ ಆಡಳಿತ ಮಂಡಳಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ಪಿಡಿಎ ಸೇರಿ ವಿವಿಧ ಇಂಜಿನಿಯರ್​ ಕಾಲೇಜುಗಳ ವಿದ್ಯರ‍್ಥಿಗಳಿಗೆ ಹೊಸ ಯೋಜನೆಗಳ ಪ್ರರ‍್ಶನ, ಕೋಡಿಂಗ್​ ಸ್ರ‍್ಧೆ, ಟೆಕ್ನೋಮೇಜ್​, ಟೆಕ್​ ಹಂಟ್​ ಸೇರಿ ಹಲವು ಸೃಜನಾತ್ಮಕ ಸ್ರ‍್ಧೆ ನಡೆಯಲಿವೆ. ರ‍್ಯಾಂಪ್​ ವಾಕ್​, ಸೆಲೆಬ್ರಿಟಿ ಕರ‍್ಯಕ್ರಮ, ಬ್ಯಾಂಜೋ ಮತ್ತು ನಾಸಿಕ್​ ಡೋಲ್​, ಡಿಜೆ ಸೇರಿ ವಿವಿಧ ಸಾಂಸತಿಕ ಕರ‍್ಯಕ್ರಮ ನಡೆಯಲಿವೆ ಎಂದರು.

ಸ್ರ‍್ಧೆಯಲ್ಲಿ ಆಸಕ್ತ ವಿದ್ಯರ‍್ಥಿಗಳು ಸಂಯೋಜಕರಾದ ಸಂದೇಶ (೬೩೬೦೯೧೧೩೪೪), ಸಚಿನ ಆರ್​.(೭೪೮೩೩೪೭೪೩೬), ಭಕ್ತಿ ಬಿ(೮೪೩೧೬೮೦೩೧೧) ಅವರನ್ನು ಸಂರ‍್ಕಿಸಬಹುದು ಎಂದು ತಿಳಿಸಿದರು.

ಎಚ್​ಕೆಇ ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕರ‍್ಯರ‍್ಶಿ ಉದಯಕುಮಾರ ಚಿಂಚೋಳಿ, ಆಡಳಿತ ಮಂಡಳಿ ಸದಸ್ಯ ಡಾ.ಶರಣಬಸಪ್ಪ ಹರವಾಳ, ಡಾ.ಅನಿಲ್​ ಪಟ್ಟಣ, ಪ್ರಮುಖರಾದ ಡಾ.ದೇವ ಸುಧಾಕರ್​ ಪಾಟೀಲ್​, ಡಾ.ಎಸ್​.ಆರ್​.ಪಾಟೀಲ್​, ಡಾ.ಎಸ್​.ಆರ್​.ಹೊಟ್ಟಿ, ಡಾ.ಭಾರತಿ ಹರಸೂರ, ಡಾ.ಶ್ರೀದೇವಿ ಸೋಮ, ಪ್ರೊ.ಶಿವಕುಮಾರ ಪಾಟೀಲ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net