ಪಿಟಿಸಿಎಲ್ ಕಾಯ್ದೆ ಪ್ರಕರಣಗಳ ತೀರ್ಪು ವಿಳಂಬ ಖಂಡಿಸಿ ಪ್ರತಿಭಟನೆ

CTD 6 PTCL -STRIKE--04
Published on

ಚಿತ್ರದುರ್ಗ: ರಾಜ್ಯಸಚಿವ ಸಂಪುಟದಲ್ಲಿ ಪಿಟಿಸಿಎಲ್ ಕಾಯ್ದೆ ತಿದ್ದುಪಡಿಯಾಗಿ 8 ತಿಂಗಳಾದರೂ,ಜಿಲ್ಲಾಧಿಕಾರಿ,ಉಪವಿಭಾಗಾಧಿಕಾರಿ ಪಿಟಿಸಿಎಲ್ ಪ್ರಕರಣಗಳಲ್ಲಿ ತೀರ್ಪು ನೀಡದೆ ಅನುಸರಿಸುತ್ತಿರುವ ವಿಳಂಬ ಧೋರಣೆ ಖಂಡಿಸಿ ರಾಜ್ಯಪಿಟಿಸಿಎಲ್ ಕಾಯ್ದೆ ಭೂಮಿ ವಂಚಿತರ ಹೋ ರಾಟ ಸಮಿತಿ,ರಾಜ್ಯಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾ ಶಾಖೆ ಸದಸ್ಯರು ಡಿಸಿ ಕಚೇರಿ ಬಳಿ ಮಂಗಳವಾರ ಪ್ರತಿಭಟಿಸಿದರು.
ಈ ಪ್ರಕರಣಗಳ ವಾದ-ಪ್ರತಿ ವಾದಗಳು ಪೂರ್ಣಗೊಂಡಿದ್ದರೂ,ಸಹ ನ್ಯಾಯಾಲಯಗಳು ಆದೇಶ ಘೋಷಿಸದೆ,ಬಾಕಿ ಇರುವ ಪ್ರಕ ರಣಗಳ ಪರಿಶೀಲಿಸಿ ತೀರ್ಪು ನೀಡಬೇಕೆಂದು ಒತ್ತಾಯಿಸಿ ಡಿಸಿಗೆ ಮನವಿ ಸಲ್ಲಿಸಿದರು.
ಮೂಲ ವಾರಸುದಾರರು ಆದೇಶ ಪಡೆದಿರುವ ಕೆಲವು ಪ್ರಕರಣಗಳು ಅಂತಿಮವಾಗಿದ್ದರೂ,ಸ್ವಾಧೀನಕ್ಕೆ ಕೆಲವು ಕ್ರಯದಾರರು ಅಡ ಚಣೆ ಉಂಟು ಮಾಡುತ್ತಿದ್ದಾರೆ. ಭೂ ಮಂಜೂರಾತಿ ವಿದ್ಯಮಾನಗಳನ್ನು ಸರಿಯಾಗಿ ಅರ್ಥ್ಯೆಸಿಕೊಳ್ಳದಿರುವುದೆ ಇದಕ್ಕೆ ಕಾರಣ. 2 ತಿಂಗಳ ಹಿಂದೆ ಚಳ್ಳಕೆರೆ ಕಸಬಾ ಹೋಬಳಿಯ ಪ್ರಕರಣವೊಂದರಲ್ಲಿ ಈ ಕಾಯ್ದೆ ಉಲ್ಲಂಘಿಸಿ ಎಸಿ ಕ್ರಯದಾರರ ಪರ ಆದೇಶಿಸಿದ್ದಾರೆ.
ಎಸಿ ಕಚೇರಿಯಲ್ಲಿರುವ ಜಿಲ್ಲೆ ಎಲ್ಲ ಪಿಟಿಸಿಎಲ್ ಪ್ರಕರಣಗಳನ್ನು ಸ್ವಯಂ ದಾಖಲಿಸಿಕೊಳ್ಳಬೇಕು. ಕಾಯ್ದೆ ಬಗ್ಗೆ ಜಾಗೃತಿ ಮೂಡಿಸಿ, ಪರಿಶಿಷ್ಟ ಜಾತಿ,ಪರಿಶಿಷ್ಟ ವರ್ಗದವರಿಗೆ ತ್ವರಿತವಾಗಿ ನ್ಯಾಯ ಒದಗಿಸ ಬೇಕೆಂದು ಒತ್ತಾಯಿಸಿದರು. ಈ ನಿಟ್ಟಿನಲ್ಲಿ ನಿರ್ಲಕ್ಷೃ ವಹಿಸಿದರೆ ರಾಜ್ಯಅಂಬೇಡ್ಕರ್ ಸೇನೆ ಅಧ್ಯಕ್ಷ ಡಾ.ಆರ್.ಕೋದಂಡರಾಮ್ ಅವರ ನೇತೃತ್ವದಲ್ಲಿ ಡಿಸಿ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಹೇಳಿದರು.
ಸೇನೆ ಜಿಲ್ಲಾಧ್ಯಕ್ಷ ಕೆ.ರಾಮಚಂದ್ರ,ಗೌರವಾಧ್ಯಕ್ಷ ಪಿ.ಎಂ.ತಿಪ್ಪೇಸ್ವಾಮಿ,ಮೊಹಮದ್‌ರಫಿ,ಆರ್.ರಾಘವೇಂದ್ರ,ವಿನೋದ್‌ಕುಮಾರ್, ಸಾಧಿಕ್‌ಚನ್ನಗಿರಿ,ಕಣುಮೇಶ್,ಎಸ್.ದಾದಾಪೀರ್,ದುರ್ಗೇಶ್,ಕುಮಾರ್,ರಘು,ಮಹಾಲಿಂಗಪ್ಪ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದ ರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net