ಪಿಕ್‌ಅಪ್ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಸಾವು

Published on

ಸಕಲೇಶಪುರ: ರಾಷ್ಟ್ರೀಯ ಹೆದ್ದಾರಿ-75ರ ಜೆ.ಪಿ. ನಗರ ಸಮೀಪ ಬುಧವಾರ ಪಿಕ್‌ಆಪ್ ವಾಹನ ಬೈಕ್‌ಗೆ ಡಿಕ್ಕಿಹೊಡೆದು ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾನೆ.

ಆಲೂರು ತಾಲೂಕು ಸಿಂಗಾಪುರ ಗ್ರಾಮದ ಮಂಜುನಾಥ್(40) ಮೃತರು. ಬೈಕ್ ಸವಾರ ರಸ್ತೆ ಕ್ರಾಸ್ ಮಾಡುವ ವೇಳೆ ಬೆಂಗಳೂ ಕಡೆಯಿಂದ ವೇಗವಾಗಿ ಬಂದ ಪಿಕ್‌ಆಪ್ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇತ್ತ ಡಿಕ್ಕಿ ಹೊಡೆದ ವಾಹನ ಚಾಲಕ ಪರಾರಿಯಾಗುವ ಯತ್ನ ನಡೆಸಿದ್ದ. ಆದರೆ, ಸ್ಥಳೀಯರು ಸಕಾಲಿಕವಾಗಿ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಪರಾರಿಯಾಗುತ್ತಿದ್ದ ವಾಹನವನ್ನು ಸಕಲೇಶಪುರ ತಾಲೂಕು ಮಾರನಹಳ್ಳಿ ಗ್ರಾಮ ಸಮೀಪ ಹಿಡಿದಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net