ಪಿಕೆಪಿಎಸ್​ ರೈತರ ಬೆನ್ನೆಲುಬು - ವಿಪ ಸದಸ್ಯ ಸವದಿ

07
Published on

ಅರಟಾಳ: ಸಹಕಾರಿ ಸಂಗಳು ಗ್ರಾಮೀಣ ಭಾಗದ ರೈತರ ಬೆನ್ನೆಲು ಆಗಿವೆ ಎಂದು ಮಾಜಿ ವಿಧಾನ ಪರಿಷತ್​ ಸದಸ್ಯ ಲಕ್ಷ$್ಮಣ ಸವದಿ ಹೇಳಿದರು. ಸಮೀಪದ ಹಾಲಳ್ಳಿ ಸಹಕಾರಿ ಸಂದ ನೂತನ ಕಟ್ಟಡಕ್ಕೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮಗಳು ಅಭಿವೃದ್ಧಿ ಹೊಂದಿದರೆ ರಾಷ್ಟ್ರ ಅಭಿವೃದ್ಧಿ ಹೊಂದಿದಂತೆ ಎಂದರು.

ಬಾಡಿಗೆ ಕಟ್ಟಡದಲ್ಲಿ ಪ್ರಾರಂಭವಾದ ಸಹಕಾರಿ ಬ್ಯಾಂಕ್​ಗೆ 45 ಲಕ್ಷ ರೂ. ಅನುದಾನ ಮಂಜೂರಾಗಿದೆ. ಇದರಿಂದ ನೂತನ ಕಟ್ಟಡ ನಿರ್ಮಾಣವಾಗಲಿದೆ. ಸಹಕಾರಿ ಸಂದ ಬೆಳವಣಿಗೆಗೆ ತಾವು ಸದಾ ಸಿದ್ಧ ಎಂದು ತಿಳಿಸಿದರು.

ಕಳಸಪ್ಪ ಹೊನಗೌಡ ಮಾತನಾಡಿ, ಸಹಕಾರಿ ಸಂದ ಕಟ್ಟಡವಾಗುತ್ತಿರುವುದರಿಂದ ಬೀಜ ಮತ್ತು ಗೊಬ್ಬರ ರೈತರಿಗೆ ಇಲ್ಲಿಯೇ ಸಿಗುವ ವ್ಯವಸ್ಥೆ ಮಾಡಲಾಗುವುದು ಎಂದರು. ವೀರೇಶ್ವರ ದೇವರು, ರಾಜಶೇಖರಯ್ಯ ಹಿರೇಮಠ, ಚನ್ನಯ್ಯ ಸ್ವಾಮೀಜಿ, ರಾಚಯ್ಯ ಮೈಗೂರ ಮಹಾರಾಜರು, ಈರಣ್ಣ ವಾಲಿ, ಶೇಖರ ನೇಮಗೌಡ, ಈರಣ್ಣ ವಾಲಿ, ವಕೀಲ ಎ.ಎಂ.ಖೋಬ್ರಿ, ಸಂದ ಅಧ್ಯಕ್ಷ ನಿಂಗಪ್ಪ ದಡ್ಡಿ, ಶಾನಿಂಗಗೌಡ ಹೊನಗೌಡ, ಅಣ್ಣಪ್ಪ ಬ್ಯಾಡರಟ್ಟಿ, ಗುರುದೇವ ಕೆಂಚಗೊಂಡ, ಬಿ.ಆರ್​.ಡಂಗಿ, ಯಂಕಪ್ಪ ಅಸ್ಕಿ, ಗೂಳಪ್ಪ ಗೌಡಪನ್ನವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net