

ಯಾದಗಿರಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು (ವ್ಯವಸಾಯ ಸೇವಾ ಸಹಕಾರ ಸಂಘಗಳು) ಡಿಸಿಸಿ ಬ್ಯಾಂಕಿನ ತಾಯಿ ಬೇರು ಆಗಿವೆ ಎಂದು ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ಸುರೇಶ ಸಜ್ಜನ್ ಹೇಳಿದರು.
ಜಿ¯್ಲÁ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಗುರುವಾರ ಕರೆದಿದ್ದ ಜಿ¯್ಲÁ ಸಹಕಾರಿ ಯುನಿಯನ್ ಒಕ್ಕೂಟದ ದ್ವಿತೀಯ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಮಟ್ಟದಲ್ಲಿ ಕೃಷಿಕರು ಸೇರಿ ಇತರರು ಷೇರು ಹಾಕುವ ಮೂಲಕ ರಚಿತವಾಗಿರುತ್ತದೆ. ಕೃಷಿಗೆ ಬೇಕಾದ ಸಾಲ, ಸೌಲಭ್ಯ ನೇರವಾಗಿ ರೈತರಿಗೆ ವಿತರಿಸುವ ಕೆಲಸ ಈ ಸಹಕಾರ ಸಂಘಗಳು ಮಾಡುತ್ತವೆ ಎಂದರು.
ಜಿ¯್ಲೆಯಲ್ಲಿನ ಇಂತಹ ಎಲ್ಲ ಪ್ರಾಥಮಿಕ ಸಹಕಾರ ಸಂಘಗಳ ಸದಸ್ಯತ್ವದ ಒಟ್ಟು ರೂಪವೇ ಜಿ¯್ಲÁ ಕೇಂದ್ರ ಸಹಕಾರ ಬ್ಯಾಂಕ್. ಅಂದರೆ ವ್ಯಕ್ತಿಯೊಬ್ಬ ನೇರವಾಗಿ ಈ ಬ್ಯಾಂಕ್‌ನ ಸದಸ್ಯನಾಗುವಂತಿಲ್ಲ. ಪ್ರಾಥಮಿಕ ಸಂಘ, ಕೃಷಿ ಉತ್ಪಾದನೆ ಸಂಘ, ಹಾಲು ಉತ್ಪಾದನೆ ಸಂಘ ಸೇರಿ ಇತರೆ ಸಂಘಗಳು ಸದಸ್ಯತ್ವ ಪಡೆದಿರುತ್ತಾರೆ ಎಂದು ಮಾಹಿತಿ ನೀಡಿದರು.
ಕರ‍್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿಸಿಸಿ ಬ್ಯಾಂಕ್‌ನ ಮಾಜಿ ಅಧ್ಯP್ಷÀ ಮಲ್ಲಿಕಾರ್ಜುನರಡ್ಡಿಗೌಡ ಕೌಳೂರ, ಎಲ್ಲರಿಗಾಗಿ ನಾನು- ನನಗಾಗಿ ಎಲ್ಲರೂ ಇದು ಸಹಕಾರ ತತ್ವದ ಮುಖ್ಯ ಸಂದೇಶ. ಇಂತಹ ಶ್ರೇಷ್ಠ ತತ್ವದ ಬುನಾದಿ ಮೇಲೆ ಕಟ್ಟಿರುವುದು ಈ ಸಹಕಾರ ಕ್ಷೇತ್ರ. ಪರಸ್ಪರ ಸಹಕಾರ, ನಂಬಿಕೆಯ ಅಮೂಲ್ಯ ತತ್ವಗಳ ಬುನಾದಿ ಮೇಲೆ ಅಸ್ತಿತ್ವಕ್ಕೆ ಬಂದ ಸಹಕಾರ ಸಂಘಗಳು, ಸಹಕಾರಿ ಬ್ಯಾಂಕ್‌ಗಳು ಇಂದು ಆರ್ಥಿಕ ನಷ್ಟ ಅನುಭವಿಸಲು ಅವುಗಳ ಮೂಲ ರಚನೆಯ ಲೋಪವೇ ಕಾರಣ ಎನ್ನುತ್ತಾರೆ ಸಹಕಾರಿ ಧುರೀಣರು ಎಂದು ಹೇಳಿದರು.
ಈ ವೇಳೆ ಜಿ¯್ಲÁ ಸಹಕಾರಿ ಯುನಿಯನ್ ಒಕ್ಕೂಟದ ದ್ವೀತಿಯ ವಾರ್ಷಿಕ ಮಹಾಸಭೆಯ ಸಂಚಿಕೆ ಬಿಡುಗಡೆ ಮಾಡಲಾಯಿತು. ಅಧ್ಯP್ಷÀ ವಿಶ್ವನಾಥರಡ್ಡಿ ದರ್ಶನಾಪುರ ಮಾತನಾಡಿದರು. ಒಕ್ಕೂಟದ ವತಿಯಿಂದ ಜಿ¯್ಲÉಯ ಹಿರಿಯ ಸಹಕಾರಿಗಳಿಗೆ ಹಾಗೂ ಸಹಕಾರಿ ಹಿರಿಯ ಧುರೀಣರಿಗೆ ಗೌರವಿಸಲಾಯಿತು. ಒಕ್ಕೂಟದ ನಿರ್ದೇಶಕ ಸಿದ್ರಾಮರಡ್ಡಿ ಕೌಳೂರ, ಬಾಪುಗೌಡ ಹುಣಸಗಿ, ರಾಜಾ ಮುಖಂದ ನಾಯಕ, ಕೆಂಚಪ್ಪ ನಗನೂರ, ನಾಜಿಮï ಅಹ್ಮದ್, ಅಂಬ್ರಣ್ಣಗೌಡ ಗಡ್ಡೆಸೂಗೂರು, ವೈಜನಾಥ ಪಾಟೀಲï, ಪ್ರಕಾಶ ಅಂಗಡಿ ಕನ್ನೆಳ್ಳಿ, ಸಹಕಾರ ಸಂಘಗಳು ಸಹಾಯಕ ನಿಬಂಧಕಿ ಸಿಮಾ ಪಾರೂಖಿ, ಸಿಇಒ ಸುಜಾತಾ ಹಿರೇಮಠ, ಮಲ್ಲಯ್ಯ ಸ್ವಾಮಿ ಇತರರಿದ್ದರು.