ಪಿಕೆಪಿಎಸ್​ ಕಟ್ಟಡ ಉದ್ಘಾಟನೆ

Published on

ವಿಜಯಪುರ : ಇಂಡಿ ತಾಲೂಕಿನ ಹೊರ್ತಿ ಪಟ್ಟಣದ ಪೋಸ್ಟ್​ ಆಫೀಸ್​ ಬಳಿಯ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಜೂ.14 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.

ವಿಡಿಸಿಸಿ ಬ್ಯಾಂಕ್​ ಅಧ್ಯಕ್ಷ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಕಟ್ಟಡ ಉದ್ಘಾಟಿಸುವರು. ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಜ್ಯೋತಿ ಬೆಳಗಿಸುವರು.

ಶಾಸಕ ಲಕ್ಷ್ಮಣ ಸವದಿ ಸಹಕಾರಿ ಸಂದ ಧ್ವಜಾರೋಹಣ ನೆರವೇರಿಸುವರು. ವೀರಟ್ಟದ (ತಿಂಥಣಿ) ಅಡವಿಲಿಂಗ ಮಹಾರಾಜರು ಹಾಗೂ ಶೇಗುಣಸಿ ವಿರಕ್ತಮಠದ ಮಹಾಂತಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಶಾಸಕ ವಿಠಲ ಕಟಕಧೊಂಡ, ಈರಣ್ಣ ಕರಿಗೌಡರ, ತಹಸೀಲ್ದಾರ್​ ಸಿದರಾಯ ಭೋಸಗಿ, ಗ್ರಾಪಂ ಅಧ್ಯಕ್ಷೆ ಜಯಶ್ರೀ ಭೋಸಗಿ, ಎಂ.ಆರ್​. ಪಾಟೀಲ, ಶ್ರೀಮಂತ ಇಂಡಿ ಹಾಗೂ ಕಲ್ಲನಗೌಡ ಪಾಟೀಲ ಆಗಮಿಸುವರೆಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net