ಪಿಕಾರ್ಡ್ ಬ್ಯಾಂಕ್‌ಗೆ ಸಿ.ವಿ.ಯತೀಶ್ ಅಧ್ಯಕ್ಷ

kdr picard
ಕಡೂರು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಸಿ.ವಿ.ಯತೀಶ್ ಅವರನ್ನು ನಿರ್ದೇಶಕರು ಅಭಿನಂದಿಸಿದರು. ಎಚ್.ಎಸ್.ನಂಜುಂಡಪ್ಪ, ಎಸ್.ವಿರೂಪಾಕ್ಷಪ್ಪ, ಓಂಕಾರಪ್ಪ, ಟಿ.ಶಂಕರಪ್ಪ, ಕೃಷ್ಣ ನಾಯಕ್, ಕೆ.ಎಸ್.ಪುಟ್ಟರಾಜು ಇತರರಿದ್ದರು.
Published on

ಕಡೂರು: ಪಟ್ಟಣದ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾಗಿ ಸಿ.ವಿ.ಯತೀಶ್ ಬುಧವಾರ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಸಹಕಾರ ಸಂಘದ ಸಹಾಯಕ ಉಪನಿಬಂಧಕಿ ಅನುಪಮಾ ಕಾರ್ಯನಿರ್ವಹಿಸಿದರು.

ಅಭಿನಂದನಾ ಸಭೆಯಲ್ಲಿ ನೂತನ ಅಧ್ಯಕ್ಷ ಸಿ.ವಿ.ಯತೀಶ್ ಮಾತನಾಡಿ, ಬ್ಯಾಂಕಿನ ಎಲ್ಲ ನಿರ್ದೇಶಕರು ಪಕ್ಷಾತೀತವಾಗಿ ಆಯ್ಕೆಯಾಗಲು ಸಹಕರಿಸಿದ್ದು, ರೈತರ ಅಭಿವೃದ್ಧಿಗೆ ಇರುವ ಅತ್ಯಲ್ಪ ಕಾಲಾವಧಿಯಲ್ಲಿ ಒತ್ತು ನೀಡಲಾಗುತ್ತದೆ. 2024-25ನೇ ಸಾಲಿನಲ್ಲಿ ಬ್ಯಾಂಕ್ ನಿಂದ 6.28 ಕೋಟಿ ರೂ. ಸಾಲ ವಿತರಣೆಯಾಗಿದೆ. ಜೂನ್ ಅಂತ್ಯದೊಳಗೆ ಬಾಕಿ ಇರುವ ಎರಡನೇ ಕಂತಿನ ಸಾಲ ರೈತರಿಗೆ ವಿತರಿಸಲಾಗುವುದು. 3.25 ಕೋಟಿ ರೂ. ರೈತರಿಂದ ಸಾಲದ ಬಾಕಿ ಬರಬೇಕಿದೆ. ಶೇ.45.46 ಪಶು ಇಲಾಖೆಯಲ್ಲಿ ಸಾಧನೆ ಮಾಡಲಾಗಿದ್ದು, ಬ್ಯಾಂಕಿಗೆ ಈ ಸಾಲಿನಲ್ಲೂ ಪೂರ್ವ ಲಾಭ ಬರುವ ನಿರೀಕ್ಷೆ ಹೊಂದಲಾಗಿದೆ ಎಂದು ಹೇಳಿದರು.

ನಿರ್ದೇಶಕರಾದ ಎಚ್.ಎಸ್.ನಂಜುಂಡಪ್ಪ, ಕೆ.ಎಚ್.ರಂಗನಾಥ್, ಎಸ್.ವಿರೂಪಾಕ್ಷಪ್ಪ, ಸಿ.ಎಂ.ಕಲ್ಲೇಶಪ್ಪ, ಎಚ್.ಎಂ.ರೇವಣ್ಣಯ್ಯ, ಓಂಕಾರಪ್ಪ, ಕೆ.ಕೆ.ಪುಷ್ಪಲತಾ, ಎಂ.ಎನ್.ನಟರಾಜ್, ತಿಮ್ಮೇಗೌಡ, ಟಿ.ಶಂಕರಪ್ಪ, ಶ್ರೀನಿವಾಸಮೂರ್ತಿ, ರೇಣುಕಮ್ಮ, ಸದಸ್ಯರಾದ ಕೃಷ್ಣ ನಾಯಕ್, ಕೆ.ಎಸ್.ಪುಟ್ಟರಾಜು, ವ್ಯವಸ್ಥಾಪಕ ಹನುಮಂತರಾಯ, ಲೆಕ್ಕಾಧಿಕಾರಿ ಶಿವಾಜಿ ಲಮಾಣಿ, ಅನಂತ ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net