ಪಿಕಾರ್ಡ್ ಬ್ಯಾಂಕ್‌ಗೆ ದಿನೇಶ್ ಅಧ್ಯಕ್ಷ

sri pacsld
ಶೃಂಗೇರಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದಿನೇಶ್ ಹೆಗಡೆ ಹಾಗೂ ಉಪಾಧ್ಯಕ್ಷ ಪ್ರಸನ್ನ ಮೀಗಾ ಅವರನ್ನು ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶಕೀಲಾ ಗುಂಡಪ್ಪ ಅಭಿನಂದಿಸಿದರು. ಲತಾ, ರೂಪಾ, ಆಶಾ ಇತರರಿದ್ದರು.
Published on

ಶೃಂಗೇರಿ: ಇತ್ತೀಚೆಗೆ ನಡೆದ ಪಿಕಾರ್ಡ್ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಬಹುಮತ ಪಡೆದು ಜಯಶಾಲಿಯಾಗಿದ್ದು, ಮಂಗಳವಾರ ನೂತನ ಅಧ್ಯಕ್ಷರಾಗಿ ದಿನೇಶ್ ಹೆಗಡೆ, ಉಪಾಧ್ಯಕ್ಷರಾಗಿ ಪ್ರಸನ್ನ ಮೀಗಾ ಅಧಿಕಾರ ಸ್ವೀಕರಿಸಿದರು.

ನಿರ್ದೇಶಕರಾಗಿ ವೆಂಕಟೇಶ್ ಅಡ್ಡಗದ್ದೆ, ಶಿವಕುಮಾರ್ ಕಡ್ಲೋಡಿ, ರಾಜಶೇಖರ್ ಅಸನಬಾಳು, ರಾಘವೇಂದ್ರ ಸುರಡಿ, ವಾಸುದೇವ ಕಚ್ಚೊಳ್ಳಿ, ಆದೇಶ್ ಕೂಡ್ಲುಮಕ್ಕಿ, ಚಂದ್ರಶೇಖರ್ ಕೊಡಿಗೆ, ನಿರುಪಮಾ ಸುರೇಶ್ ಕಾಮತ್, ಪ್ರಕಾಶ್ ಕಿಗ್ಗ, ಕೋದಂಡ ಹೊಳೆಕೊಪ್ಪ, ಶಿವಪ್ಪಗೌಡ ತಿಪ್ಪನಮಕ್ಕಿ, ಬಾಲಕೃಷ್ಣ ನೆಮ್ಮಾರ್ ಆಯ್ಕೆಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರನಕೊಡಿಗೆ ಭಾಸ್ಕರ್ ನಾಯ್ಕ, ಮುಖಂಡರಾದ ರಮೇಶ್ ಭಟ್, ವೆಂಕಟೇಶ್ ಕುರದಮನೆ, ಪಪಂ ಸದಸ್ಯರಾದ ಲತಾ ಸುಧಾಕರ್, ರೂಪಾ, ಆಶಾ ದಿನೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net