ಪಿಕಾಡ್ ಬ್ಯಾಂಕ್ ಅಧ್ಯಕ್ಷರಾಗಿ ಎಂ.ಶಂಕರ್ ಆಯ್ಕೆ.

ಪಿಕಾಡ್ ಬ್ಯಾಂಕ್ ಅಧ್ಯಕ್ಷರಾಗಿ ಎಂ.ಶಂಕರ್ ಆಯ್ಕೆ.
Published on

ಚನ್ನರಾಯಪಟ್ಟಣ: ಇಲ್ಲಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಎಂ.ಶಂಕರ್‌ರವರು ಅವಿರೋಧವಾಗಿ ಆಯ್ಕೆಯಾದರು.

ಹಿಂದಿನ ಅಧ್ಯಕ್ಷ ಗುಳ್ಳಹಳ್ಳಿ ನಂಜುಂಡೇಗೌಡ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ ಹಿನ್ನಲೆಯಲ್ಲಿ ಸೋಮವಾರದಂದು ಚುನಾವಣೆ ನಿಗದಿಯಾಗಿತ್ತು. 15 ನಿರ್ದೇಶಕ ಬಲದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್‌ನ ಸಾಲಗಾರರಲ್ಲದ ಕ್ಷೇತ್ರದಿಂದ ಆಯ್ಕೆಯಾಗಿದ್ದ ಎಂ.ಶಂಕರ್(ಪ್ರಕೃತಿ ಶಂಕರಣ್ಣ) ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಒಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ಸಿಡಿಒ ಸುನೀಲ್‌ರವರು ಅವರ ಆಯ್ಕೆಯನ್ನು ಘೋಷಿಸಿದರು.

ನೂತನ ಅಧ್ಯಕ್ಷರನ್ನು ಮುಖಂಡರಾದ ಮಾಜಿ ಶಾಸಕರಾದ ಸಿ.ಎಸ್.ಪುಟ್ಟೇಗೌಡ, ಎಂ.ಎ.ಗೋಪಾಲಸ್ವಾಮಿ, ಬ್ಲಾಕ್ ಅಧ್ಯಕ್ಷರುಗಳಾದ ಜೆ.ಎಂ.ರಾಮಚಂದ್ರ, ಎಂ.ಕೆ.ಮಂಜೇಗೌಡ, ಮುಖಂಡರಾದ ಹೆಚ್.ಎಸ್.ವಿಜಯ್‌ಕುಮಾರ್, ಎಂ.ಎ.ರಂಗಸ್ವಾಮಿ, ಸಿ.ಎಸ್.ಯುವರಾಜ್, ಮಂಜುನಾಥ್, ಸೇರಿ ಬ್ಯಾಂಕ್‌ನ ಉಪಾಧ್ಯಕ್ಷೆ ಜಯಲಕ್ಷ್ಮಮ್ಮ ಮತ್ತು ನಿರ್ದೇಶಕರುಗಳು, ಕಾರ್ಯಕರ್ತರು ಅಭಿನಂದಿಸಿದರು.

ಈ ವೇಳೆ ಮಾತನಾಡಿದ ಅಧ್ಯಕ್ಷ ಎಂ.ಶಂಕರ್‌ರವರು, ಪಿಎಲ್ಡಿ ಬ್ಯಾಂಕಿನ ಅಭಿವೃದ್ಧಿಗೆ, ರೈತರ ಅಭ್ಯುದ್ಯಯಕ್ಕಾಗಿ ಶ್ರಮಿಸಿದ ಅವರು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಬ್ಯಾಂಕಿನ ಉಳಿವಿಗಾಗಿ ಬಡ್ಡಿಮನ್ನಾ, ಮತ್ತು ಮನೆ ನಿರ್ಮಾಣಕ್ಕೆಂದು ಪಡೆಯಲಾಗಿರುವ ಸಾಲದ ಮರುಪಾವಿತಿಗೆ ರಿಯಾಯ್ತಿ ಘೋಷಿಸುವಂತೆ ಒತ್ತಾಯಿಸಲಾಗುವುದು, ಇನ್ನೂ ಬ್ಯಾಂಕಿಗೆ 11.56 ಕೋಟಿ ಸಾಲ ವಸೂಲಾತಿಯಾಗಬೇಕಿದೆ. ಇದರಲ್ಲಿ ಕೇಂದ್ರ ಬ್ಯಾಂಕಿಗೆ 5.5ಕೋಟಿ ಮರುಪಾವತಿ ಮಾಡಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net