ಪಿಒಪಿ ವಿಗ್ರಹಕ್ಕೆ ಅವಕಾಶ ಇಲ್ಲ !

ganesha vigraha
ತೇರದಾಳ ಪಟ್ಟಣದ ಗಣೇಶ ವಿಗ್ರಹ ಮಾರಾಟಗಾರರ ಅಂಗಡಿಗಳಿಗೆ ಭೇಟಿ ನೀಡಿ, ವಿಗ್ರಹ ಪರಿಶೀಲಿಸಿದ ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ ಹಾಗೂ ಸಿಬ್ಬಂದಿ.
Published on

ತೇರದಾಳ: ಪಟ್ಟಣದ ಮೂರ್ತಿ ತಯಾರಕರ ಹಾಗೂ ಗಣೇಶ ವಿಗ್ರಹ ಮಾರಾಟಗಾರರ ಅಂಗಡಿಗಳಿಗೆ ಪುರಸಭೆ ಮುಖ್ಯಾಧಿಕಾರಿ ಆನಂದ ಕೆಸರಗೊಪ್ಪ ಸಿಬ್ಬಂದಿಯೊಂದಿಗೆ ಗುರುವಾರ ಭೇಟಿ ನೀಡಿ ಗಣೇಶ ವಿಗ್ರಹಗಳನ್ನು ಪರಿಶೀಲಿಸಿದರು.

ಬಳಿಕ ಮಾರಾಟಗಾರೊಂದಿಗೆ ಮಾತನಾಡಿದ ಅವರು, ಸರ್ಕಾರದ ಸೂಚನೆಯನ್ವಯ ಜಿಲ್ಲಾಧಿಕಾರಿ ಆದೇಶದಂತೆ ನಿಸರ್ಗಸ್ನೇಹಿ, ಮಣ್ಣಿನ ಗಣೇಶ ವಿಗ್ರಹಗಳನ್ನು ಮಾಡಬೇಕು. ಪಿಒಪಿ ವಿಗ್ರಹಗಳನ್ನು ತಯಾರಿಸುವುದು ಹಾಗೂ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಅಂತಹ ಪ್ರಕರಣಗಳು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಿಯೋಜಿತ ಸ್ಥಳದಲ್ಲೇ ವಿಸರ್ಜನೆ:
ಸಾರ್ವಜನಿಕರು ನಿಸರ್ಗ ಸ್ನೇಹಿ ಮಣ್ಣಿನ ಗಣೇಶ ಮೂರ್ತಿ ಸ್ಥಾಪಿಸಿ, ರಾಸಾಯನಿಕವಲ್ಲದ ನಿಸರ್ಗಸ್ನೇಹಿ ಹಸಿರು ಪಟಾಕಿಗಳನ್ನು ಮಾತ್ರ ಬಳಸಬೇಕು. ಪಟ್ಟಣದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಗಣೇಶ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗುತ್ತದೆ. ಸಾರ್ವಜನಿಕರು ಪುರಸಭೆ ನಿಯೋಜಿತ ಸ್ಥಳಗಳಲ್ಲಿಯೇ ಮಾತ್ರ ಗಣೇಶ ಮೂರ್ತಿ ವಿಸರ್ಜನೆ ಮಾಡಬೇಕೆಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net