ಪಿಒಪಿ ಮೂರ್ತಿ ಸ್ಥಾಪನೆ ನಿಷೇಧ

01
Published on

ಕೊಡೇಕಲ್ : ಪಿಒಪಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಸರ್ಕಾರ ನಿಷೇಧ ಹೇರಿದ್ದು, ಎಲ್ಲರೂ ಪರಿಸರಸ್ನೇಹಿ ಮೂರ್ತಿ ಪ್ರತಿಷ್ಠಾಪಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಹೇಳಿದರು.

ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ನಿಮಿತ್ತ ಮಂಗಳವಾರ ಕೊಡೇಕಲ್ ಠಾಣೆಯಲ್ಲಿ ಶಾಂತಿ ಸಭೆ ನಡೆಸಿದ ಅವರು, ಪರಿಸರ ಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಸರ್ಕಾರ ಪಿಒಪಿ ಗಣೇಶ ಪ್ರತಿಷ್ಠಾಪನೆ ಮತ್ತು ಮಾರಾಟ ನಿಷೇಧಿಸಲಾಗಿದೆ. ಹಾಗೊಂದು ವೇಳೆ ಪ್ರತಿಷ್ಠಾಪಿಸಿದ್ದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಬಾರಿ ಗಣೇಶ ಹಬ್ಬದ ಜತೆ ಈದ್ ಮಿಲಾದ್ ಬಂದಿದ್ದರಿAದ ಶಾಂತಿ ಮತ್ತು ಸೌಹಾರ್ದದಿಂದ ಆಚರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪಿಸುವ ಮಂಡಳಿಗಳು ಸ್ಥಳೀಯ ಗ್ರಾಪಂನಿAದ ಅನುಮತಿ ಪಡೆಯಬೇಕು. ಡಿಜೆ ಕೂಡ ಬಳಸುವಂತಿಲ್ಲ. ಜೆಸ್ಕಾಂ, ಲೋಕೋಪಯೋಗಿ ಇಲಾಖೆ ಮತ್ತು ಸ್ಥಳೀಯ ಠಾಣೆಗಳಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದರು.

ಡಿವೈಎಸ್‌ಪಿ ಎಂ.ಎನ್. ಇನಾಮದಾರ, ಗ್ರಾಮದ ಐ.ಆರ್.ಘಾಟೆ ಮತ್ತು ಸುರೇಶ ದೇವೂರ ಮಾತನಾಡಿದರು. ಪಿಎಸ್‌ಐ ಸುರೇಶ ಬಾವಿಮನಿ ಪ್ರಾಸ್ತಾವಿಕ ಮಾತನಾಡಿದರು.

ಪ್ರಭಾರಿ ವೃತ್ತ ನಿರೀಕ್ಷಕ ವಿಜಯಕುಮಾರ ಬಿರಾದಾರ, ಪಿಎಸ್‌ಐ ಸುರೇಶ ಬಾವಿಮನಿ, ಕಕ್ಕೇರಾ ಪುರಸಭೆ ಮುಖ್ಯಾಧಿಕಾರಿ ಪ್ರವೀಣಕುಮಾರ, ಬಸನಗೌಡ, ಯಲ್ಲಪ್ಪ ಅಂಬ್ಲಿಹಾಳ, ಸೋಮಲಿಂಗಪ್ಪ ದೊರಿ, ಬಸನಗೌಡ ಮಾಲಿಗೌಡ್ರ, ಭೀಮನಗೌಡ ಕಡದರಾಳ, ವೀರಸಂಗಪ್ಪ ಅಂಬ್ಲಿಹಾಳ, ಪಟೇಲ್ ಸಾಲವಾಡಗಿ, ಅಲೀಂಪಾಷಾ ಸೈಯದ್, ಕರವೇ ತಾಲೂಕು ಅಧ್ಯಕ್ಷ ರಮೇಶ ಬಿರಾದಾರ, ವಲಯಾಧ್ಯಕ್ಷ ಹಣಮಗೌಡ ಮಾಲಿಪಾಟೀಲ್, ಶಿವು ಮನ್ಯಾಳ, ಸಿದ್ರಾಮಪ್ಪ ತುಂಬಗಿ, ರಮೇಶ ಪೂಜಾರಿ, ರಮೇಶ ಚವನಬಾವಿ, ಬಸವರಾಜ ದೊಡಮನಿ, ಅಂಬ್ರೇಶ ಇತರರಿದ್ದರು. ಯಲ್ಲಪ್ಪ ಸ್ವಾಗತಿಸಿದರು. ರಮೇಶ ವಂದಿಸಿದರು. ಬಸವರಾಜ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net