ಪಿಒಪಿ ಕಿಟ್ ವಿತರಣೆ

24 ckm 10
ಚಿಕ್ಕಮಗಳೂರು ಎಫ್‌ಪಿಒನಲ್ಲಿ ಪುನಶ್ಚೇತನ ಕೃಷಿಗೆ ಪ್ರೋತ್ಸಾಹ: ಸೆಹಗಲ್ ಫೌಂಡೇಶನ್‌ನಿAದ ರೈತರಿಗೆ ಪಿಒಪಿ ಕಿಟ್ ವಿತರಣೆ ಮತ್ತು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೈತರು.
Published on

ಚಿಕ್ಕಮಗಳೂರು: ರಾಸಾಯನಿಕ ಬಳಕೆಯಿಂದ ಮಣ್ಣು ಸತ್ವ ಕಳೆದುಕೊಳ್ಳುತ್ತದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ಬೆಳೆ ಕಡಿಮೆಯಾಗಲಾರಂಭಿಸುತ್ತದೆ. ಅದೇ ಪುನಶ್ಚೇತನ ಕೃಷಿ ಪದ್ಧತಿ ಅಳವಡಿಕೆ ಮಾಡಿಕೊಂಡಲ್ಲಿ ಮಣ್ಣು ಇನ್ನಷ್ಟು ಫಲವತ್ತಾಗಿ ವರ್ಷದಿಂದ ವರ್ಷಕ್ಕೆ ಬೆಳೆಯ ಇಳುವರಿ ಹೆಚ್ಚುತ್ತದೆ ಎಂದು ಸೆಹಗಲ್ ಫೌಂಡೇಷನ್ ಸದಸ್ಯ ಇಮ್ರಾನ್ ತಿಳಿಸಿದರು.

ಚಿಕ್ಕಮಗಳೂರು ಎಫ್‌ಪಿಒನಲ್ಲಿ ಪುನಶ್ಚೇತನ ಕೃಷಿಗೆ ಪ್ರೋತ್ಸಾಹ: ಸೆಹಗಲ್ ಫೌಂಡೇಶನ್‌ನಿAದ ರೈತರಿಗೆ ಪಿಒಪಿ ಕಿಟ್ ವಿತರಣೆ ಮತ್ತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸೆಹಗಲ್ ಫೌಂಡೇಷನ್ ಸದಸ್ಯ ಸುಮಂತ್ ಮಾತನಾಡಿ, ಮಣ್ಣಿನ ಆರೋಗ್ಯ ಉತ್ತಮಪಡಿಸುವಲ್ಲಿ ಪುನಶ್ಚೇತನ ಕೃಷಿ ಪದ್ಧತಿ ಹೆಚ್ಚು ಸಹಕಾರಿಯಾಗಿದೆ. ಮಣ್ಣಿನ ಫಲವತ್ತತೆ ಹೆಚ್ಚಳಕ್ಕೆ ಮೈಕ್ರೋಬಯಲ್ ಕಿಟ್ ಹಾಗೂ ಸುಣ್ಣದ ಕಿಟ್ ಸಹಕಾರಿಯಾಗಿದೆ. ಮಾದರಿ ಮಣ್ಣು ಪರಿಕ್ಷಾ ವರದಿ ಆಧಾರದ ಮೇಲೆ ರೈತರು ಇವುಗಳ ಬಳಕೆ ಮಾಡಬೇಕು ಎಂದು ಮಾಹಿತಿ ನೀಡಿದರು.

ಚಿಕ್ಕಮಗಳೂರು ಎಫ್‌ಪಿಒ ಅಧ್ಯಕ್ಷ ಪಿ.ವಿ. ಲೋಕೇಶ್ ಮಾತನಾಡಿ, ಪುನಶ್ಚೇತನ ಕೃಷಿ ಪದ್ಧತಿ ಅಳವಡಿಕೆ ಮಾಡಿಕೊಳ್ಳುವುದರಿಂದ ರೈತರಿಗೆ ಹೆಚ್ಚಿನ ಲಾಭವಾಗಲಿದೆ. ಈ ಕ್ಷೇತ್ರದಲ್ಲಿ ಸೇವಾ ಕಾರ್ಯ ನಡೆಸುತ್ತಿರುವ ಸೆಹಗಲ್ ಫೌಂಡೇಷನ್ ಕಾರ್ಯ ಶ್ಲಾಘನೀಯ ಎಂದರು.

ಎಫ್‌ಪಿಒ ಉಪಾಧ್ಯಕ್ಷ ವಿಜಯಕುಮಾರ್, ಸೆಹಗಲ್ ಫೌಂಡೇಷನ್‌ನ ರಕ್ಷಿತಾ ಉಪಸ್ಥಿತರಿದ್ದರು. ಅರಿವು ಕಾರ್ಯಕ್ರಮದಲ್ಲಿ ೫೦ಕ್ಕೂ ಹೆಚ್ಚು ರೈತರು ಭಾಗವಹಿಸಿ ಪುನಶ್ಚೇತನ ಕೃಷಿ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ ರೈತರಿಗೆ ಪಿಒಪಿ ಕಿಟ್, ಸುಣ್ಣದ ಕಿಟ್ ವಿತರಣೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net