ಪಿಎಸ್​ಐ ಪಟ್ಟಿಯಲ್ಲಿ ಮಮತಾ 23ನೇ ಸ್ಥಾನ

Mamatha nayak
Published on

ಭಟ್ಕಳ: ರೈತ ಕುಟುಂಬದಲ್ಲಿ ಜನಸಿದ ಗ್ರಾಮೀಣ ಪ್ರತಿಭೆ ಈಗ ಪೊಲೀಸ್ ಸಬ್ ಇನ್ಸ್​ಪೆಕ್ಟರ್ ಆಗುವ ಮೂಲಕ ಗ್ರಾಮೀಣ ಭಾಗದ ಯುವ ಜನತೆಗೆ ಮಾದರಿ ಆಗಿದ್ದಾರೆ.

ಭಟ್ಕಳ ತಾಲೂಕಿನ ಹಡಿನ್ ಗ್ರಾಮದ ಮಮತಾ ಶಂಕರ ನಾಯ್ಕ ಶುಕ್ರವಾರ ಪ್ರಕಟವಾದ ಪಿಎಸ್​ಐ ಪಟ್ಟಿಯಲ್ಲಿ 22ನೇ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಇವರು ತಾಲೂಕಿನ ಬೆಳಕೆಯ ಜಿ.ಪಂ. ಹಾಯರ್ ಪ್ರೖೆಮರಿ ಶಾಲೆಯಲ್ಲಿ ಪ್ರಾಥಮಿಕ, ಬೆಳಕೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ, ಬೈಂದೂರಿನ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಪಿ.ಯು., ಶಿಕ್ಷಣ ಪಡೆದು ಧಾರವಾಡದಲ್ಲಿ ಪದವಿ ಮುಗಿಸಿದ್ದರು. ಕಡು ಬಡತನದಲ್ಲಿ ಬೆಳೆದ ಇವರು ಧಾರವಾಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿದ್ದರು. ಮಾಜಿ ಶಾಸಕ ಮಂಕಾಳು ವೈದ್ಯ ಅವರು ಪ್ರತಿಭಾನ್ವಿತ ವಿದ್ಯಾರ್ಥಿನಿಯ ಸಾಮರ್ಥ್ಯ ಅರಿತು ಅಂದು ಮನೆಗೆ ತೆರಳಿ ಒಂದು ಲಕ್ಷ ರೂ. ಧನಸಹಾಯ ಮಾಡಿ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವಂತೆ ಪೋ›ತ್ಸಾಹ ನೀಡಿದ್ದರು. ವಿದ್ಯಾರ್ಥಿನಿಯ ಅಚಲ ಪ್ರಯತ್ನದಿಂದ ರಾಜ್ಯಕ್ಕೆ 23ರ್ಯಾಂಕ್ ಪಡೆದು ಗಮನ ಸೆಳೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net